ಜೂನ್ 24 ರಂದು ಆಕಾಶದಲ್ಲಿ ಗೋಚರಿಸಲಿದೆ ಸ್ಟ್ರಾಬೆರಿ ಮೂನ್(ಹಾಟ್ ಮೂನ್/ಹನಿ ಮೂನ್)
ಈ ವರ್ಷದ ಜೂನ್ 24 ರಂದು ಆಕಾಶದಲ್ಲಿ ವಿಶಿಷ್ಟವಾದ ವಿದ್ಯಮಾನವು ಗೋಚರಿಸಲಿದೆ. ಜೂನ್ 24 ರಂದು ಚಂದ್ರನು ಆಕಾಶದಲ್ಲಿ ಸ್ಟ್ರಾಬೆರಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ವಿಶಿಷ್ಟ ಖಗೋಳ ಘಟನೆಯನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ. ಈ ದಿನ, ಚಂದ್ರನು ಗಾತ್ರದಲ್ಲಿ ದೊಡ್ಡದಾಗಿ ಮತ್ತು ಗುಲಾಬಿ ಬಣ್ಣದಲ್ಲಿ ಸ್ಟ್ರಾಬೆರಿಯಂತೆ ಕಾಣಿಸುತ್ತಾನೆ. ಹಾಗಾಗಿ ಜೂನ್ 24ರ ಹುಣ್ಣಿಮೆಯ ದಿನದಂದು ಹೊರಹೊಮ್ಮುವ ಈ ಚಂದ್ರನನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಇದನ್ನು ಹಾಟ್ ಮೂನ್ ಅಥವಾ ಹನಿ ಮೂನ್ ಎಂದೂ ಕರೆಯುತ್ತಾರೆ.
ಅಂದು ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯ ಸಾಮೀಪ್ಯದಿಂದಾಗಿ ಅದರ ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಅದನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ.
ಸ್ಟ್ರಾಬೆರಿ ಮೂನ್ ಪ್ರಾಚೀನ ಅಮೇರಿಕನ್ ಬುಡಕಟ್ಟು ಜನಾಂಗದವರಿಂದ ಈ ಹೆಸರನ್ನು ಪಡೆದುಕೊಂಡಿದೆ. ಅವರು ಹುಣ್ಣಿಮೆಯೊಂದಿಗೆ ಸ್ಟ್ರಾಬೆರಿಗಳ ಕೊಯ್ಲು ಋತುವಿನ ಆರಂಭವನ್ನು ಗುರುತಿಸುತ್ತಾರೆ. ವಾಸ್ತವವಾಗಿ, ಸ್ಟ್ರಾಬೆರಿ ಮೂನ್ ಸ್ಥಳೀಯ ಅಮೆರಿಕನ್ ಹೆಸರು. ಇದನ್ನು ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಯುರೋಪಿನಲ್ಲಿ, ಸ್ಟ್ರಾಬೆರಿ ಚಂದ್ರನನ್ನು ರೋಸ್ ಮೂನ್ ಎಂದು ಕರೆಯಲಾಗುತ್ತದೆ. ಇದು ಗುಲಾಬಿಗಳ ಕೊಯ್ಲು ಅನ್ನು ಸಂಕೇತಿಸುತ್ತದೆ. ಉತ್ತರ ಗೋಳಾರ್ಧದಲ್ಲಿ ಇದನ್ನು ಹಾಟ್ ಮೂನ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಸಮಭಾಜಕದ ಉತ್ತರಕ್ಕೆ ಬೇಸಿಗೆಯ ಆರಂಭವನ್ನು ಸೂಚಿಸುತ್ತದೆ. ಇದನ್ನು ಅಲ್ಲಿ ಬೇಸಿಗೆಯ ಆರಂಭದ ಸಂಕೇತವೆಂದು ಪರಿಗಣಿಸಲಾಗಿದೆ.
ಇದನ್ನು ಬ್ಲೂಮಿಂಗ್ ಮೂನ್, ಗ್ರೀನ್ ಕಾರ್ನ್ ಮೂನ್, ಹೋರ್ ಮೂನ್, ಬರ್ತ್ ಮೂನ್, ಎಗ್ ಲೇಯಿಂಗ್ ಮೂನ್ ಮತ್ತು ಹ್ಯಾಚಿಂಗ್ ಮೂನ್, ಹನಿ ಮೂನ್ ಮತ್ತು ಮೀಡ್ ಮೂನ್ ಎಂದೂ ಕರೆಯುತ್ತಾರೆ. ಸ್ಟ್ರಾಬೆರಿ ಚಂದ್ರನು ಒಂದು ರಾತ್ರಿಗಿಂತ ಹೆಚ್ಚು ಕಾಲ ಗೋಚರಿಸುತ್ತಾನೆ.
ಇತ್ತೀಚಿನ ದಿನಗಳಲ್ಲಿ, ಅನೇಕ ಖಗೋಳ ಘಟನೆಗಳು ಕಂಡುಬಂದಿವೆ. ಈ ಹಿಂದೆ, ಸೂಪರ್ ಮೂನ್, ಬ್ಲಡ್ ಮೂನ್, ಚಂದ್ರ ಗ್ರಹಣ ಮತ್ತು ನಂತರ ರಿಂಗ್ ಆಫ್ ಫೈರ್ ಅಂದರೆ ಸೂರ್ಯಗ್ರಹಣ ಗೋಚರಿಸಿದೆ. ಈಗ ಜೂನ್ 24 ರಂದು ಸ್ಟ್ರಾಬೆರಿ ಮೂನ್ ಕೂಡ ಬಹಳ ವಿಶೇಷವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಸ್ಟ್ರಾಬೆರಿ ಚಂದ್ರನು ವಸಂತಕಾಲದ ಕೊನೆಯ ಹುಣ್ಣಿಮೆಯನ್ನು ಸಾಂಕೇತಿಸುತ್ತದೆ
ಸ್ಟ್ರಾಬೆರಿ ಮೂನ್ ನಂತರ ಜುಲೈ 24 ರಂದು ಬಕ್ ಮೂನ್ ಮತ್ತು ಆಗಸ್ಟ್ 22 ರಂದು ಸ್ಟರ್ಜನ್ ಮೂನ್ ನಡೆಯಲಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರಕ್ತ ಹೆಪ್ಪುಗಟ್ಟುವಿಕೆ/ ಥ್ರಂಬೋಸಿಸ್ ಎಂದರೇನು? ಕೋವಿಡ್ ರೋಗಿಗಳಿಗೆ ಇದು ಹೇಗೆ ಅಪಾಯಕಾರಿ?#Saakshatvhealthtips #bloodclotting #thrombosis https://t.co/lGBBNqECko
— Saaksha TV (@SaakshaTv) June 21, 2021
ಮಾವಿನ ಎಲೆಗಳ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು#Saakshatv #healthtipsbenefits #mangoleaves https://t.co/aDEOrNCvat
— Saaksha TV (@SaakshaTv) June 22, 2021
ಕುಂಬಳಕಾಯಿ ಸಿಪ್ಪೆಯ ಚಟ್ನಿ#Saakshatv #cookingrecipe #chutney https://t.co/WNYoO3giym
— Saaksha TV (@SaakshaTv) June 21, 2021
ಲಸಿಕೆ ಪಡೆಯುವ ಮೊದಲು/ನಂತರ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯಗಳು#vaccinated https://t.co/cexv6VVMQa
— Saaksha TV (@SaakshaTv) June 22, 2021
#strawberriesmoon