ಲಖನೌ : ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ನಿರ್ಮಾಣವಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ಹೊರಹಾಕಿದ್ದಾರೆ.
ವಕೀಲ ಧರ್ಮೇಂದ್ರ ಚೌಧರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ‘ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಪರಾಧ ಮತ್ತು ಕೊರೊನಾ ನಿಯಂತ್ರಣದಲ್ಲಿ ಇಲ್ಲ. ಶ್ರೀ ಧರ್ಮೇಂದ್ರ ಚೌಧರಿ ಅವರನ್ನು ಬುಲಂದ್‌ಶಹರ್‌ನಲ್ಲಿ ಎಂಟು ದಿನಗಳ ಹಿಂದೆ ಅಪಹರಿಸಲಾಗಿತ್ತು. ಅವರ ಶವ ನಿನ್ನೆ ಪತ್ತೆಯಾಗಿದೆ. ಕಾನ್ಪುರ, ಗೋರಖ್‌ಪುರ ಮತ್ತು ಬುಲಂದ್‌ಶಹರ್‌ನಲ್ಲಿ ನಡೆಯುವ ಪ್ರತಿ ಪ್ರಕರಣದ ವಿಚಾರದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಜಡತೆಯಿಂದ ಕೂಡಿದೆ. ಜಂಗಲ್ ರಾಜ್‌ನ ಗುರುತುಗಳು ಕಾಣುತ್ತವೆ. ಈ ಸರ್ಕಾರ ಇನ್ನೂ ಎಷ್ಟುದಿನಗಳ ಕಾಲ ನಿದ್ರೆ ಮಾಡುತ್ತದೆ ಎಂದು ಅಚ್ಚರಿಗೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.