ಶುಗರ್ ಬರೋದಕ್ಕೆ ಜಂಕ್ ಫುಡ್ ಹೇಗೆ ಕಾರಣವಾಗುತ್ತೆ ಗೊತ್ತಾ..?

1 min read
junk-food saaksha tv

ಶುಗರ್ ಬರೋದಕ್ಕೆ ಜಂಕ್ ಫುಡ್ ಹೇಗೆ ಕಾರಣವಾಗುತ್ತೆ ಗೊತ್ತಾ..? junk-food saaksha tv

ಬೆಂಗಳೂರು : ಇದು ಓಡುವ ಪ್ರಪಂಚ.. ಇಲ್ಲಿ ನಾವು ಉಳಿಯಬೇಕಿದ್ದರೇ ಅದರ ವೇಗದಲ್ಲಿ ನಾವು ಓಡಲೇಬೇಕು. ಹೀಗಾಗಿ ಈ ಬಿಜಿ.. ದುನಿಯಾದಲ್ಲಿ ಕೆಲವರು ಸಮಯದ ಅಭಾವದಿಂದ ಅವಸರದಲ್ಲಿ ಏನೋ ಒಂದು ತಿಂದರೇ ಆಯ್ತು ಅಂತ ಜಂಕ್ ಫುಡ್ ತೆಗೆದುಕೊಳ್ಳುತ್ತಾರೆ.

ಅದರಲ್ಲೂ ಹೆಚ್ಚಿನ ಯುವ ಜನತೆ ಈಗ ಜಂಕ್ ಫುಡ್, ಪಿಜ್ಜಾ, ಬರ್ಗರ್ ನಂತಹ ಫಾಸ್ಟ್ ಫುಡ್ ತಿನ್ನುತ್ತಾರೆ. ಆದರೆ ಆಹಾರ ಪದಾರ್ಥಗಳಾದ ಫಾಸ್ಟ್ ಫುಡ್, ಜಂಕ್ ಫುಡ್, ಬೇಕರಿ ಪದಾರ್ಥಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು ಕೊಬ್ಬಿನಿಂದಾಗಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಈ ಹಿಂದೆ ಸಂಶೋಧನೆಗಳು ನಡೆದಿವೆ.

ಇದರ ಮುಂದುವರೆದ ಭಾಗವಾಗಿ ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಯು ಅದೇ ವಿಷಯವನ್ನು ಮತ್ತೊಮ್ಮೆ ನಿಜವೆಂದು ತೋರಿಸಿದೆ.

ಡಯಾಬಿಟಿಸ್ ಬರಲು.. ಪರಿಸರದಲ್ಲಿ ಲಭ್ಯವಿರುವ ಆಹಾರ, ವಾತಾವರದ ಮಧ್ಯೆ ಇರುವ ಸಂಬಂಧಗಳ ಮೇಲೆ ‘ಎನ್ ವೈಯು’ ಸಂಶೋಧನೆ ನಡೆಸಿದೆ. ( ಈ ಸಂಶೋಧನಾ ವಿಷಯ: ನೈಬರ್ ಹುಡ್ ಫುಡ್ ಎನ್ವಿರಾನ್ ಮೆಂಟ್ಸ್ ಎಫೆಕ್ಸ್ ಆನ್ ಡಯಾಬಿಟಿಸ್ ). ಇದಕ್ಕೆ ಅಲ್ಲಿನ ವೆಟರನ್ಸ್ ಹೆಲ್ತ್ ಅಡ್ಮಿನಿಸ್ಟ್ರೇಷನ್ ಇಲಾಖೆಯು ನೆರವು ನೀಡಿದೆ.

junk-food saaksha tv

ಫಾಸ್ಟ್ ಫುಡ್, ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರಗಳು ಲಭ್ಯವಿರುವ ವಾತಾವರಣದಲ್ಲಿ ಮಧುಮೇಹ ಪ್ರಕರಣಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದರೇ ನಗರಕ್ಕಿಂದ ದೂರವಿರುದ ಹಳ್ಳಿಗಳಲ್ಲಿ ಮಧುಮೇಹ ಪ್ರಕರಣಗಳು ಕಡಿಮೆ ಇರೋದು ಸಂಶೋಧಕರ ಗಮನಕ್ಕೆ ಬಂದಿದೆ. ಲಕ್ಷಾಂತರ ಸಾಮಾನ್ಯ ಜನರನ್ನು ಸಂಶೋದನೆಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

ಈ ಅಧ್ಯಯನದಿಂದ ಬಂದ ಫಲಿತಾಂಶಗಳನ್ನು ಪ್ರಮುಖ ಲೇಖಕಿ ರಾನಿಯಾ ಕಾಂಚಿ ಮತ್ತು ಅವರ ಸಹೋದ್ಯೋಗಿಗಳು ಜಂಟಿಯಾಗಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‍ನೆಟ್‍ವರ್ಕ್ ಓಪನ್ ಓಪನ್ ಟ್ರಸ್ಟೆಡ್ ಸೋರ್ಸ್ ಜರ್ನಲ್‍ನಲ್ಲಿ ನಮೂದು ಮಾಡಿದ್ದಾರೆ.

ಈ ಹಿಂದೆ ಹಲವು ತಜ್ಞರು ಮತ್ತು ಅನುಭವಿಗಳ ಅಧ್ಯಯನದಲ್ಲಿ ಇದೇ ವಿಷಯ ಬೆಳಕಿಗೆ ಬಂದಿದೆ. ಎಲ್ಲಾ ಪೆÇೀಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರ ಮತ್ತು ಅದಕ್ಕೆ ಹೊಂದಿಕೆಯಾಗುವ ಕನಿಷ್ಠ ಲಘು ವ್ಯಾಯಾಮದ ಕೊರತೆಯಿಂದ ಮಧುಮೇಹದಂತಹ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd