ಲಾರ್ಡ್ಸ್ ನಲ್ಲಿ ರಾಹುಲ್ ದರ್ಬಾರ್.. ಕನ್ನಡಿಗನಿಗೆ ಪಂದ್ಯ ಶ್ರೇಷ್ಠ
ಬೆಂಗಳೂರು : ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದ ಹಾನರ್ ಬೋರ್ಡ್ ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ.
ಭಾರತ ತಂಡ ಇಂಗ್ಲೆಂಡ್ ವಿರುದ್ಧ ಈ ಐತಿಹಾಸ ಜಯ ಸಾಧಿಸಲುವಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದ್ದರು.
ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ರಾಹುಲ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಲಾಗಿದೆ.
ಅಂದಹಾಗೆ ಲಾಡ್ರ್ಸ್ ಅಂಗಳದಲ್ಲಿ ಶತಕ ಸಿಡಿಸಬೇಕು ಅನ್ನೋದು ಸಾಕಷ್ಟು ಬ್ಯಾಟ್ಸ್ ಮೆನ್ ಗಳ ಕನಸಾಗಿರುತ್ತದೆ. ಲಾಡ್ರ್ಸ್ ಅಂಗಳದಲ್ಲಿ ಶತಕ ಸಿಡಿಸೋದು ಅಂದ್ರೆ ಅದೊಂದು ವಿಶೇಷವಾದ ಅನುಭವ ನೀಡುತ್ತೆ.
ಇದನ್ನು ಕನ್ನಡಿಗ ಕೆ.ಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ನೆರವೇರಿಸಿಕೊಂಡಿದ್ದಾರೆ.
ಇನ್ನು ರಾಹುಲ್ ಅವರ ಈ ಸೆಂಚುರಿ ಸಾಕಷ್ಟು ಮಹತ್ವ ಪಡೆದಿದ್ದು, ಪಂದ್ಯ ಭಾರತದತ್ತ ಇರುವಂತೆ ಮಾಡಿತ್ತು. ಹೀಗಾಗಿ ರಾಹುಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿಲಾಗಿದೆ.
ಇನ್ನು ಈಗಿನ ಕ್ರಿಕೆಟರ್ಸ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಬಳಿಕ ಒಬ್ಬ ಟಾಪ್ ಕ್ಲಾಸ್ ಕ್ರಿಕೆಟರ್ ಅಂದ್ರೆ ಅದು ಕೆ.ಎಲ್.ರಾಹುಲ್. ಇದ್ರಲ್ಲಿ ಯಾವುದೇ ಅನುಮಾನ ಪಡುವ ಅವಶ್ಯಕತೆಯೇ ಇಲ್ಲ. ಯಾಕೆಂದ್ರೆ ರಾಹುಲ್ ಪಕ್ಕಾ ಕ್ಲಾಸ್ ಪ್ಲೇಯರ್.
ಮುಖ್ಯವಾಗಿ ಭಾರತೀಯ ಕ್ರಿಕೆಟ್ ನಲ್ಲಿ ಕೆಲ ಅಪರೂಪದ ಬ್ಯಾಟ್ಸ್ ಮೆನ್ ಗಳು ಮಾತ್ರ ಸ್ವೀಪ್ ಶಾಟ್ ಗಳನ್ನ ಆಡುತ್ತಾರೆ. ಅದರಲ್ಲಿ ರಾಹುಲ್ ಕೂಡ ಒಬ್ಬರು..!
ರಾಹುಲ್ ಸ್ವೀಪ್ ಜೊತೆಗೆ ರಿವರ್ಸ್ ಸ್ವೀಪ್ ಕೂಡ ಮಾಡುವುದು ವಿಶೇಷದ ಸಂಗತಿ. ಕೇವಲ ಕ್ಲಾಸ್ ಶಾಟ್ ಗಳಲ್ಲದೇ ಬಿಗ್ ಸಿಕ್ಸರ್ ಗಳನ್ನ ಹೊಡೆಯೋದ್ರಲ್ಲಿ ರಾಹುಲ್ ಪಂಟರ್ ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರವೇ.
ಒಂದು ಮಾತಿನಲ್ಲಿ ಹೇಳೋದಾದ್ರೆ ರಾಹುಲ್ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿಯ ಕ್ಲಾಸ್, ರೋಹಿತ್ ರ ಮಾಸ್ ಎರಡೂ ಒಳಗೊಂಡಿರುತ್ತೆ.
ಯಾವುದೇ ರೀತಿಯಿಂದ ನಾವು ಯೋಚನೆ ಮಾಡಿದ್ರೂ ಕೆ.ಎಲ್. ರಾಹುಲ್, ವಿರಾಟ್, ರೋಹಿತ್ ರ ಉತ್ತರಾಧಿಕಾರಿ ಅನ್ನೋದ್ರಲ್ಲಿ ಡೌಟೇ ಇಲ್ಲ.
ಜೊತೆಗೆ ರಾಹುಲ್ ನಾಯಕತ್ವ ಗುಣಗಳಿರುವ ಜೀನಿಯಸ್ ಕೂಡ ಹೌದು..! ಮುಂದೊಂದು ದಿನ ರಾಹುಲ್ ಟೀಂ ಇಂಡಿಯಾ ಸಾರಥ್ಯ ವಹಿಸುವುದು ಕೂಡ ನೂರಕ್ಕೆ ನೂರು ಸತ್ಯ.









