ರಾಜ್ಯ ಸಭಾ ಚುನಾವಣೆ – ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದೆಯಾ ಕೆ. ಪ್ರಕಾಶ್ ಶೆಟ್ಟಿ ಹೆಸರು..!
ರಾಜ್ಯದಲ್ಲಿ ಜೂನ್ 19ರಂದು ರಾಜ್ಯ ಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿವೆ. ಕಾಂಗ್ರೆಸ್‍ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ನಿಂದ ಎಚ್.ಡಿ. ದೇವೇಗೌಡರ ಹೆಸರುಗಳು ಕೇಳಿಬರುತ್ತಿವೆ. ಅದ್ರಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು ಮೊದಲ ಬಾರಿ ಅವರು ಮೇಲ್ಮನೆಗೆ ಪ್ರವೇಶಿಸಲಿದ್ದಾರೆ.
ಈ ನಡುವೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಪ್ರಭಾಕರ ಕೋರೆಯವರು ತಮಗೆ ಕೊನೆಯದಾಗಿ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರಂತೆ. ಮತ್ತೊಂದೆಡೆ ಬಂಡಾಯದ ಬಿಸಿ ಮುಟ್ಟಿಸುತ್ತಿರುವ ಮತ್ತು ಬಿಎಸ್‍ವೈಗೆ ಸದಾ ಬಿಸಿ ತುಪ್ಪವಾಗಿ ಪರಿಣಮಿಸುತ್ತಿರುವ ಉಮೇಶ್ ಕತ್ತಿಯವರ ಸಹೋದರ ರಮೇಶ್ ಕತ್ತಿಯವರಿಗೆ ಟಿಕೆಟ್ ನೀಡಲೇ ಬೇಕು ಅನ್ನೋ ಒತ್ತಾಯವೂ ಇದೆ. ಅದು ಅಲ್ಲದೆ ಟಿಕೆಟ್ ನೀಡದೇ ಇದ್ದಲ್ಲಿ ಸರ್ಕಾರವನ್ನು ಬೀಳಿಸುವ ಎಚ್ಚರಿಕೆಯನ್ನು ಉತ್ತರ ಕರ್ನಾಟಕದ ಕೆಲವು ಶಾಸಕರು ನೀಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಅದೇ ರೀತಿ ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಕೂಡ ಪಟ್ಟಿಯಲ್ಲಿದೆಯಂತೆ. ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಕಳೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದಿಂದ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ರಾಜ್ಯ ಸಭೆಗೆ ಟಿಕೆಟ್ ಸಿಗುತ್ತದೆ ಎಂಬ ಲೆಕ್ಕಚಾರವೂ ಇದೆ. ಹಾಗೇ ಮುರಳೀಧರ್ ರಾವ್ ಅವರ ಹೆಸರು ಕೂಡ ಬಿಜೆಪಿ ಪಟ್ಟಿಯಲ್ಲಿದೆ.
ಈ ನಡುವೆ, ಉದ್ಯಮಿ ಕೆ. ಪ್ರಕಾಶ್ ಶೆಟ್ಟಿಯವರ ಹೆಸರು ಕೂಡ ಬಿಜೆಪಿ ಪಟ್ಟಿಯಲ್ಲಿದೆ. ಉಡುಪಿ ಮೂಲದ ಕೆ. ಪ್ರಕಾಶ್ ಶೆಟ್ಟಿಯವರು ಎಮ್.ಆರ್.ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ. ಗೋಲ್ಡ್ ಫಿಂಚ್ ಹೋಟೆಲ್ ಬ್ರ್ಯಾಂಡ್ ಮೂಲಕ ಈಗಾಗಲೇ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. ಹಾಗೇ ಬಂಟರ ಸಮುದಾಯ ಸೇರಿದಂತೆ ವಿವಿಧ ಸಮುದಾಯದ ಜನತೆ ನೆರವಿನ ಹಸ್ತವನ್ನು ನೀಡಿದ್ದಾರೆ. ಅನಾಥಾಶ್ರಮ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಧಾರ್ಮಿಕ, ಕ್ರೀಡೆ ಹೀಗೆ ನಾನಾ ರಂಗದಲ್ಲೂ ಪ್ರಕಾಶ್ ಶೆಟ್ಟಿಯವರು ಕೊಡುಗೈ ದಾನಿಯಾಗಿದ್ದಾರೆ. ಕಳೆದ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ.
ಈ ನಡುವೆ, ಕೆ. ಪ್ರಕಾಶ್ ಶೆಟ್ಟಿಯವರು ರಾಜಕೀಯ ರಂಗಕ್ಕೆ ಬರಬೇಕು ಅಂತ ಅನೇಕ ವರ್ಷಗಳಿಂದ ಪ್ರಯತ್ನ ಪಡುತ್ತಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಿಂದಲೇ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಕಾಶ್ ಶೆಟ್ಟಿಯವರು ಕೊನೆ ಕ್ಷಣದಲ್ಲಿ ಹಿಂದೆ ಸರಿದ್ರು. ಅದು ಅಲ್ಲದೆ, ಸದ್ಯ ಅಶ್ವಥ್ ನಾರಾಯಣ, ವಿ. ಸೋಮಣ್ಣ ಹಾಗೂ ಸಿಎಂ ಬಿಎಸ್‍ವೈ. ಸಿ.ಟಿ. ರವಿ ಜೊತೆಗೂ ಕೆ. ಪ್ರಕಾಶ್ ಶೆಟ್ಟಿಯವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಕೆ. ಪ್ರಕಾಸ್ ಶೆಟ್ಟಿಯವರಿಗೆ ಬಿಜೆಪಿಯಿಂದ ರಾಜ್ಯ ಸಭೆಗೆ ಟಿಕೆಟ್ ಸಿಕ್ಕರೂ ಸಿಗಬಹುದು.
ಓರ್ವ ಉದ್ಯಮಿಯಾಗಿ ಯಶ ಸಾಧಿಸಿರುವ ಪ್ರಕಾಶ್ ಶೆಟ್ಟಿಯವರಿಗೆ ರಾಜಕೀಯವಾಗಿ ಸಮಾಜ ಸೇವೆ ಮಾಡಬೇಕು ಅನ್ನೋ ತುಡಿತವಿದೆ. ಪ್ರಕೃತಿ ವಿಕೋಪ, ನೆರೆ, ಪ್ರವಾಹ, ಈಗ ಕೋವಿಡ್ -19 ಹೀಗೆ ಪ್ರತಿ ಹಂತದದಲ್ಲೂ ಎಂಆರ್‍ಜಿ ಸಮೂಹ ಸಂಸ್ಥೆಗಳ ಮೂಲಕ ನೆರವು ನೀಡುತ್ತಿದ್ದಾರೆ. ತಮ್ಮ 60ನೇ ಹುಟ್ಟು ಹಬ್ಬದ ಪ್ರಕಾಶಾಭಿನಂದನಾ ಕಾರ್ಯಕ್ರಮದಲ್ಲೂ ಸುಮರು 100 ವಿಕಲ ಚೇತನರಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ ಆರ್ಥಿಕ ಸಹಾಯ ಮಾಡಿ ತಮ್ಮ ಅಭಿನಂದನಾ ಸಮಾರಂಭವನ್ನು ಅರ್ಥಪೂರ್ಣಗೊಳಿಸುವಂತೆ ಮಾಡಿದ್ದರು.
ಇದೀಗ ರಾಜಕೀಯಕ್ಕೆ ಎಂಟ್ರಿಯಾಗುತ್ತಿರುವ ಕೆ. ಪ್ರಕಾಶ್ ಶೆಟ್ಟಿಯವರಿಗೆ ಬಿಜೆಪಿ ಮಣೆ ಹಾಕುತ್ತಾ ಅನ್ನೋ ಅದನ್ನು ಕಾದು ನೋಡಬೇಕು. ಹಾಗೇ ಎರಡು ಸ್ಥಾನಗಳಿಗೆ ಸಿಕ್ಕಪಟ್ಟೆ ಪೈಪೋಟಿ ಇದೆ. ಹೈಕಮಾಂಡ್ ನಿಂದ ಡಾ. ಕೆ.ವಿ. ಕಾಮತ್ ಹಾಗೂ ಕೆ. ಪ್ರಕಾಶ್ ಶೆಟ್ಟಿಯವರು ಹೆಸರಿದೆ. ಹೀಗಾಗಿ ರಾಜ್ಯದ ಬಿಜೆಪಿಯಿಂದ ಹೊಸ ಮುಖಗಳಿಗೆ ಅವಕಾಶ ನೀಡಿ ಮತ್ತೊಂದು ಅಚ್ಚರಿಯ ನಿರ್ಧಾರವನ್ನು ನೀಡಲು ಹೊರಟಂತಿದೆ ಬಿಜೆಪಿ ಹೈಕಮಾಂಡ್.








