K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ
ಶಿವಮೊಗ್ಗ : ರಾಜ್ಯದ ೧.೨೦ ಕೋಟಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲಾಗುತ್ತಿದೆ. ಅಮೃತ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವುದೇ ನಮ್ಮ ಪುಣ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ದೇಶದ ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜನತೆ ಸಂತೋಷ, ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಜನ ಸಾಮಾನ್ಯರೂ ತಿರಂಗ ಧ್ವಜ ಹಾರಿಸುತ್ತಿರುವುದು ಜನರಲ್ಲಿ ದೇಶ ಭಕ್ತಿ ಹೆಚ್ಚುತ್ತಿರುವುದಕ್ಕೆ ನಿದರ್ಶನ.
ರಾಜ್ಯದ ೧.೨೦ ಕೋಟಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲಾಗುತ್ತಿದೆ. ಅಮೃತ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವುದೇ ನಮ್ಮ ಪುಣ್ಯ.
ಭಾರತದ ಬಗ್ಗೆ ವಿದೇಶಗಳಲ್ಲಿ ಒಂದು ರೀತಿಯ ತಿರಸ್ಕಾ ತಿರಸ್ಕಾರ ಭಾವ ಇತ್ತು. ಆದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಬಗ್ಗೆ ಜಗತ್ತಿನಲ್ಲಿ ಹೆಮ್ಮೆ ಮೂಡಿದೆ. ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯಗೆ ಧ್ವಜದ ಬಣ್ಣದ ಬಗ್ಗೆ ಕಲ್ಪನೆಯೇ ಇಲ್ಲ, ಅದಕ್ಕಾಗಿ ಅವರು ರಾಜ್ಯದ ಜನತೆ ಕ್ಷಮೆ ಕೇಳಬೇಕು.
ಅವರಿಗೆ ಕಾಂಗ್ರೆಸ್ ನವರು ಅಭ್ಯಾಸ ವರ್ಗ ಮಾಡಿ ಧ್ವಜದ ಬಣ್ಣ ಮತ್ತು ಮಹತ್ವ ತಿಳಿಸಿಕೊಡಲಿ.
ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದಾಗ ತ್ರಿವರ್ಣ ಧ್ವಜಕ್ಕೆ ಸಿದ್ದರಾಮಯ್ಯ ಅಪಮಾನ ಮಾಡಿದ್ದನ್ನು ಜನತೆ ನೋಡಿದ್ದಾರೆ.
ಈ ದೇಶವನ್ನು ತುಂಡು ಮಾಡಿದ ನೆಹರೂ ವಂಶಸ್ಥರು ಈಗ ಭಾರತ್ ಜೋಡೋ ಅಭಿಯಾನಕ್ಕೆ ಮುಂದಾಗಿದ್ದಾರೆ.
ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ. ದೇಶ ಒಡೆಯುವುದೇ ಅವರ ಕೆಲಸ ಎಂದು ಕಿಡಿಕಾರಿದ್ದಾರೆ.