kabja motion poster
ಕಬ್ಜ…. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದು. ಸೂಪರ್ ಸ್ಟಾರ್ ಉಪೇಂದ್ರ ಅವರ ಉಪೇಂದ್ರ ಅವರ ನಟನೆಯ ಕಬ್ಜ ಸಿನಿಮಾ ಥೇಮ್ ಪೋಸ್ಟರ್ ನಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮಿಲಿಯನ್ ಗಟ್ಟಲೆ ವೀವ್ಸ್ ಗಿಟ್ಟಿಸಿಕೊಂಡು ಅಭಿಮಾನಿಗಳಿಂದ ವಾವ್ ರೆಸ್ಪನ್ಸ್ ಪಡೆದುಕೊಂಡು ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಈ ಚಿತ್ರದಲ್ಲಿ ಅಂಡರ್ ವರ್ಲ್ಡ್ ಸ್ಟೋರಿ ಇರಲಿದ್ದು, ಉಪ್ಪಿ ರಗಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಸಿನಿಮಾ ಅಪ್ ಡೇಟ್ಸ್ ಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ರಿಯಲ್ ಸ್ಟಾರ್ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಹೌದು ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದ್ದು, ಸೂಪರ್ ರೆಸ್ಪಾನ್ಸ್ ಸಿಗ್ತಿದೆ. ಮೋಷನ್ ಪೋಸ್ಟರ್ ಸೂಪರಾಗಿದ್ದು, ಅಭಿಮಾನಿಗಳ ಗಮನ ಸೆಲೆಯುತ್ತಿದೆ. ಈ ಸಿನಿಮಾ ನೈಜ ಘಟನೆಗಳ ಆಧರಿತ ಕಾಲ್ಪನಿಕ ಸಿನಿಮಾವಾಗಿದೆ. ಉಪ್ಪಿ ಅವರ ರೆಟ್ರೋ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎಂಟಿಬಿ. ನಾಗರಾಜ್ ಅರ್ಪಿಸುತ್ತಿರುವ ಚಿತ್ರಕ್ಕೆ ಆರ್.ಚಂದ್ರು ಅವರು ಆಕ್ಷನ್ ಕಟ್ ಹೇಳುತ್ತಿದ್ದು, ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಿದೆ. ಅಂದ್ಹಾಗೆ ಈ ಚಿತ್ರಕ್ಕೆ ಎಂಟಿಬಿ ನಾಗರಾಜ್ ಅವರು ಬಂಡವಾಳ ಹೂಡುತ್ತಿಲ್ಲ. ಸಿನಿಮಾವನ್ನು ‘ಅರ್ಪಿಸುತ್ತಿದ್ದಾರೆ’ ಅಷ್ಟೆ. ಕಬ್ಜ 1947 ರ ಘಟನೆಯನ್ನು ಆಧರಿ ಸಿನಿಮಾವಾಗಿದೆ. ಅನುಯಾಯಿಯೊಬ್ಬರ ಕೊಲೆ ಆ ನಂತರ ಆತನ ಮಗ ರೌಡಿಸಂಗೆ ಇಳಿಯುವುದು ಹೀಗೆ ಕತೆ ಸುತ್ತುತ್ತದೆ. ಸಿನಿಮಾವು 1947 ಹಾಗೂ 1980 ರ ದಶಕದ ಘಟನೆಗಳಿಂದ ಪ್ರೇರೇಪಿತಗೊಂಡಿದೆ.
ವಿಶೇಷ ಅಂದ್ರೆ ಉಪೇಂದ್ರ ಅವರು ಚಿತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲದೇ ಕೆಜೆಫ್ ರೀತಿ ಈ ಸಿನಿಮಾದ 2ನೇ ಭಾಗವೂ ಸಹ ಬರಲಿದೆ. ಅಲ್ಲದೇ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕಬ್ಜ ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. 2021ರ ವೇಳೆಗೆ ಚಿತ್ರ ಬಿಡುಗಡೆ ಆಗಲಿದೆ ಎಂದು ಮೋಷನ್ ಪೋಸ್ಟರ್‌ನಲ್ಲಿ ಹೇಳಲಾಗಿದೆ. ಮೋಷನ್ ಪೋಸ್ಟರ್ ನಲ್ಲಿ ಉಪೇಂದ್ರ ಅವರು ರೆಟ್ರೊ ಲುಕ್ ನಲ್ಲಿ ಹಳೆ ಬುಲೆಟ್ ಮೇಲೆ ಬರುತ್ತಿರುವ ಚಿತ್ರವಿದ್ದು, ಈ ಪೋಸ್ಟರ್ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದೆ.
ರತ್ನನ್ ಪ್ರಪಂಚದಲ್ಲಿ ‘ ಇನ್ಶೂರೆನ್ಸ್ ಏಜೆಂಟ್ ರತ್ನಾಕರ’ನಾಗಿ ಬರಲಿದ್ದಾರೆ ಡಾಲಿ..!
kabja motion poster
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel