Kabzaa : ಮೊದಲ ದಿನವೇ ಬಾಕ್ಸ್ ಆಫೀಸ್ “ಕಬ್ಜ” ಭರ್ಜರಿ ಕಲೆಕ್ಷನ್….
ಈ ವರ್ಷದ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಮಾರ್ಚ್ 17 ರಂದು ಅಪ್ಪು ಹುಟ್ಟು ಹಬ್ಬದಂದು ಭರ್ಜರಿಯಾಗಿ ವಿಶ್ವಾದ್ಯಂತ 4000 ಥಿಯೆಟರ್ ಗಳಲ್ಲಿ ರಿಲೀಸ್ ಆಗಿದೆ. ಚಿತ್ರದ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಕುತೂಹಕಲ್ಲೆ ತೆರೆ ಬಿದ್ದುದ್ದಿದ್ದು ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಚಿತ್ರ ಯಶಸ್ವಿಯಾಗಿದೆ.
ಯಾವುದೇ ಪ್ರೀಮಿಯರ್ ಮತ್ತು ಫ್ಯಾನ್ ಶೋ ಇಲ್ಲದೇ ಆರಂಭಗೊಂಡ ಕಬ್ಜ ಚಿತ್ರ ಕರ್ನಾಟದಲ್ಲಿ 20 ಕೋಟಿ ಸೇರಿದಂತೆ ವಿಶ್ವಾದ್ಯಂತ 54 ಕೋಟಿ ರುಪಾಯಿ ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇಂದು (ಮಾರ್ಚ್ 18) ಹಾಗೂ ನಾಳೆ (ಮಾರ್ಚ್ 19) ವೀಕೆಂಡ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಅಲ್ಲದೇ ಮುಂದಿನ ವಾರ ಯುಗಾದಿ ಹಬ್ಬದ ಪ್ರಯುಕ್ತ ಸರ್ಕಾರಿ ರಜೆಗಳು ಇರುವುದರಿಂದ ಮುಂದಿನ ವಾರವೂ ಚಿತ್ರ ಉತ್ತಮ ಕಲೆಕ್ಷನ್ ಮಾಡಲಿದೆ.
ಉಪೇಂದ್ರ, ಸುದೀಪ್, ಶಿವರಾಜ್ಕುಮಾರ್ ಅವರಿಗೆ ಪರಭಾಷೆಗಳಲ್ಲೂ ಅಭಿಮಾನಿಗಳಿರುವುದರಿಂದ ಪರಭಾಷೆಗಳಲ್ಲೂ ಸಿನಿಮಾ ಉತ್ತಮವಾಗಿ ಓಡುತ್ತಿದೆ. ಬೆಳಗ್ಗೆ ಟಿಕೆಟ್ ಬುಕ್ಕಿಂಗ್ ಆಗಿರಲಿಲ್ಲವಾದರೂ ಸಂಜೆ ವೇಳೆಗೆ ಎಲ್ಲಾ ಥಿಯೇಟರ್ ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿದೆ.
Kabzaa : First Day Box Office “Kabzaa” Huge Collection….