ಕಚ್ಚಾ ಬಾದಮ್… ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವ್ಯಕ್ತಿ ಯಾರು…
ಇತ್ತೀಚಿನ ದಿನಗಳಲ್ಲಿ ಕಚ್ಚಾ ಬಾದಾಮ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಆಗುತ್ತಿದೆ. ಬೆಂಗಾಲಿ ಭಾಷೆಯಲ್ಲಿ ಮೂಡಿಬಂದಿರುವ ಈ ಹಾಡಿನ ಸಾಹಿತ್ಯ ಜನರ ಅರ್ಥವಾಗದಿದ್ದರು ಈ ಹಾಡು ಇಡೀ ದೇಶದಲ್ಲಿ ಟ್ರೆಂಡ್ ಆಗುತ್ತಿದೆ. ಈ ಹಾಡನ್ನು ಯಾವುದೇ ಖ್ಯಾತ ಗಾಯಕ ಹಾಡಿಲ್ಲ ಬದಲಿಗೆ ಬೀದಿಗಳಲ್ಲಿ ಕಡಲೆಕಾಯಿ ಮಾರುವ ಸಾಮಾನ್ಯ ವ್ಯಕ್ತಿ ಹಾಡಿದ್ದಾರೆ. ಯಾರು ಈ ಟ್ರೆಂಡ್ ಹುಟ್ಟು ಹಾಕಿದ್ದು ಅನ್ನುವ ಮಾಹಿತಿಯನ್ನ ನಾವು ತೊರಿಸ್ತಿವಿ ನೋಡಿ…
ಭುವನ್ ಬಡೈಕರ್ ಪಶ್ಚಿಮ ಬಂಗಾಳದ ಕುರಲ್ಜುರಿ ಗ್ರಾಮದ ಸಾಮಾನ್ಯ ಬಡ ವ್ಯಕ್ತಿ. ಜೀವನೋಪಾಯಕ್ಕಾಗಿ ಗ್ರಾಮದ ಬೀದಿಗಳಲ್ಲಿ ನೆಲಗಡಲೆ ಮಾರುವ ವ್ಯಕ್ತಿ ಭುಬನ್ ಬಡೈಕರ್. ಭುವನ್ ಸೈಕಲ್‌ನಲ್ಲಿ ನೆಲಗಡಲೆ ಚೀಲವನ್ನು ಹೊತ್ತು ಬೀದಿ ಬೀದಿಗಳಲ್ಲಿ ಸುತ್ತಿ ಕಡಲೆಕಾಯಿಯನ್ನು ಮಾರಾಟ ಮಾಡುತ್ತಾನೆ. ಕ್ರಿಯೇಟಿವ್ ಆಗಿ ಕಡಲೆ ಕಾಯಿ ಮಾರಾಟ ಮಾಡಲು, ಭುವನ್ ಕಚ್ಚಾ ಬಾದಮ್ ಹಾಡನ್ನು ತಯಾರಿಸಿಕೊಂಡಿದ್ದಾರೆ.
ಕಚಾ ಬಾದಮ್ ಹಾಡನ್ನು ವಾಸ್ತವವಾಗಿ ಕಡಲೆಕಾಯಿಯ ಮೇಲೆ ಮಾಡಲಾಗಿದೆ. ಬೆಂಗಾಲಿಯಲ್ಲಿ ನೆಲಗಡಲೆಗೆ ಹಸಿ ಬಾದಾಮಿ ಎನ್ನುತ್ತಾರೆ.
ಪಶ್ಚಿಮ ಬಂಗಾಳದ ಪುಟ್ಟ ಹಳ್ಳಿಯಲ್ಲಿ ವಾಸಿಸುವ ಭುವನ್ ಗೆ ಬಂಗಾಳಿ ಭಾಷೆ ಬಿಟ್ಟು ಬೇರೆ ಭಾಷೆ ಅರ್ಥವಾಗುವುದಿಲ್ಲ. ಗುಡಿಸಲಿನಲ್ಲಿ ವಾಸವಾಗಿರುವ ಇವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಸೇರಿ ಐವರ ಕುಟುಂಬವಿದೆ. ಕುಟುಂಬದ ಜವಬ್ದಾರಿಯನ್ನ ಇವರೇ ವಹಿಸಿಕೊಂಡಿದ್ದಾರೆ. ನಿತ್ಯ 3ರಿಂದ 4 ಕೆ.ಜಿ ಕಡಲೆಕಾಯಿ ಮಾರಾಟಮಾಡಿ ಭುವನ್ ಅವರು 200-250 ರೂ. ಗಳಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಈ ರೀಲ್ಸ್ ವೈರಲ್ ಆದ ನಂತರ ಭುವನ್ ಅವರನ್ನ ಮಾತನಾಡಿಸಿದಾಗ, ಬೀದಿಗಳಲ್ಲಿ ಜನರನ್ನು ಆಕರ್ಷಿಸಲು 10 ವರ್ಷಗಳ ಹಿಂದೆ ಕಚ್ಚಾ ಬದಮ್ ಹಾಡನ್ನು ರಚಿಸಿದ್ದಾಗಿ ಹೇಳಿದ್ದಾರೆ. ಹಾಡು ವೈರಲ್ ಆದ ನಂತರ, ಭುವನ್ ಅವರ ಕಚ್ಚಾ ಬಾದಮ್ ಮಾರಾಟ ಹೆಚ್ಚಾಗಿದೆ. ಚುನಾವಣಾ ಸಂದರ್ಭದಲ್ಲಿ ಅವರನ್ನೂ ಪ್ರಚಾರದ ಭಾಗವಹಿಸಲು ಕೇಳಿಕೊಳ್ಳುತ್ತಿದ್ದಾರೆ.
ರಾಪರ್ ರಾನ್-ಇ ಕಚ್ಚಾ ಬಾದಾಮಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ರೀಮಿಕ್ಸ್ ಮಾಡಲಾಗಿದೆ. ರಿಮಿಕ್ಸ್ ಹಾಡು ಯೂಟ್ಯೂಬ್‌ನಲ್ಲಿ 30 ಮಿಲಿಯನ್ ವೀಕ್ಷಣೆ ಮತ್ತು 1.2 ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ.