ಕಜಾಕಿಸ್ತಾನದಲ್ಲಿ ಹಿಂಸಾಚಾರ – 7 ದಿನಗಳಲ್ಲಿ 164 ಜನ ಸಾವು

1 min read

ಕಜಾಕಿಸ್ತಾನದಲ್ಲಿ ಹಿಂಸಾಚಾರ – 7 ದಿನಗಳಲ್ಲಿ 164 ಜನ ಸಾವು

ತೈಲ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಕಜಾಕಿಸ್ತಾನದಲ್ಲಿ ತೈಲ ಬೆಲೆ ಹೆಚ್ಚಳ ಖಂಡಿಸಿ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದ್ದು , ಪೊಲೀಸರು ,  ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ ಈವರೆಗೂ ಅಂದ್ರೆ 7 ದಿನಗಳ ಒಳಗೆ ಸುಮಾರು 164 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ..  ಕಜಕಿಸ್ತಾನದ ವಾಣಿಜ್ಯ ನಗರವಾದ ಅಲ್ಮಾಟಿಯಲ್ಲೇ 103 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ನೀಡಿರೋದಾಗಿ ಅಲ್ಲಿನ  ಮಾಧ್ಯಮಗಳು ವರದಿ ಮಾಡಿದೆ.

ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ 26 ಪ್ರತಿಭಟನಾಕಾರರು ಮತ್ತು 16 ಭದ್ರತಾ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಆದರೆ ಈಗ ಆ ಸಂಖ್ಯೆ 164 ಕ್ಕೆ ತಲುಪಿದೆ. ಇತ್ತೀಚೆಗೆ ಪ್ರತಿಭಟನಾಕಾರರನ್ನ ಉಗ್ರರು ಎಂದು ಸಂಬೋಧಿಸಿದ್ದ ಅಲ್ಲಿನ ಸಚಿವಾಲಯವು ಅವರನ್ನ ಗುಂಡಿಕ್ಕಿ ಕೊಲ್ಲುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದೆ ಎಂದು ವರದಿಯಾಗಿತ್ತು..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd