ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲ್ ಸದ್ಯದಲ್ಲೇ ವಿವಾಹ ಆಗಲಿದ್ದಾರಂತೆ. ಇತ್ತೀಚಿಗೆ ಲಕ್ಷ್ಮಿ ಮಂಚು ಚಾಟ್ ಶೋನಲ್ಲಿ ಮಾತನಾಡಿದ ಕಾಜಲ್, ಶೀಘ್ರದಲ್ಲೇ ಮದುವೆಯಾಗುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ ಯಾರು, ಎನ್ನುವ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಆದರೀಗ 35 ವರ್ಷದ ನಟಿ ಕಾಜಲ್ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.
ಮೂಲಗಳ ಪ್ರಕಾರ ಕಾಜಲ್ ಔರಂಗಾಬಾದ್ ನ ಖ್ಯಾತ ಉದ್ಯಮಿ ಜೊತೆ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ.ಸದ್ಯದಲ್ಲೇ ಮದುವೆ ಮತ್ತು ಹುಡುಗ ಯಾರು ಎನ್ನುವ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಕಾಜಲ್ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.
ಅಂದಹಾಗೆ ಕಾಜಲ್ ಮದುವೆ ವಿಚಾರ ಸುದ್ದಿಯಾಗುತ್ತಿರುವುದು ಇದೆ ಮೊದಲೇನಲ್ಲ. ಈ ಮೊದಲು ಸಹ ಕಾಜಲ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿದೆ.
ಇನ್ನು ಕಾಜಲ್ ಸದ್ಯ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇಂಡಿಯನ್-2, ಮುಂಬೈ ಸಾಗ ಸೇರಿದ್ದಂತೆ ಸಾಕಷ್ಟು ಸಿನಿಮಾಗಳು ಕಾಜಲ್ ಕೈಯಲ್ಲಿವೆ.