ಗುಲಾಬಿ ಬಣ್ಣದ ಡ್ರೆಸ್ ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಕಾಜಲ್…..
ನಟಿ ಕಾಜಲ್ ಅಗರ್ವಾಲ್ ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಪೊಸ್ಟ್ ಹಂಚಿಕೊಂಡಿದ್ದಾರೆ. ಕಾಜಲ್ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ತಮ್ಮ ಬೇಬೆ ಬಂಪ್ ಪ್ರದರ್ಶಿಸುವ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರೇರಣಾತ್ಮಕ ಕ್ಯಾಪ್ಶನ್ ನೀಡಿದ್ದಾರೆ. “ನೀವು ಯೋಗ್ಯರು. ನೀವು ಸಮರ್ಥರು. ನೀವು ನಿಮ್ಮದೇ ಅತ್ಯುತ್ತಮ ಆವೃತ್ತಿಯಾಗಿದ್ದೀರಿ. ಟಿಕೆಟ್ ಕಾಯ್ದಿರಿಸಿ. ಪುಸ್ತಕವನ್ನು ಬರೆಯಿರಿ. ಕನಸನ್ನು ರಚಿಸಿ. ನಿಮ್ಮ ಸಾಮ್ರಾಜ್ಯವಿದು. ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಸ್ತುತ ಪತಿ ಗೌತಮ್ ಕಿಚ್ಲು ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಅಗರ್ವಾಲ್ ಇತ್ತೀಚೆಗೆ ಸಾಂಪ್ರದಾಯಿಕ ಸೀಮಂತ ಸಮಾರಂಭವನ್ನು ನಡೆಸಿದರು. ಈ ಸಂದರ್ಭದಲ್ಲಿ, ದಂಪತಿಗಳು ಸಾಂಪ್ರದಾಯಿಕ ಡ್ರೆಸ್ ಗಳಲ್ಲಿ ಕಾಣಿಸಿಕೊಂಡರು.. ಸಾಂಪ್ರದಾಯಿಕ ಬನಾರಸಿ ಗುಲಾಬಿ ಬಣ್ಣದ ಸೀರೆಯಲ್ಲಿ ಕಾಜಲ್ ಆಕರ್ಷಕವಾಗಿ ಕಾಣುತ್ತಿದ್ದರು, ಗೌತಮ್ ಬಿಳಿ ಕುರ್ತಾ-ಪೈಜಾಮಾ ಮತ್ತು ಕೆಂಪು ಜಾಕೆಟ್‌ನಲ್ಲಿ ಜೊತೆಯಾಗಿದ್ದರು .
ಹೊಸ ವರ್ಷದ ಸಂದರ್ಭದಲ್ಲಿ, ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ತಮ್ಮ ಮೊದಲ ಮಗುವಿನ ಆಗಮನದ ಸಿಹಿ ಸುದ್ದಿ ನೀಡಿದ್ದರು. 2020 ರ ಅಕ್ಟೋಬರ್ 30 ರಂದು ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ ಚಿತಂಜೀವಿ ಜೊತೆ ನಟಿಸಿರುವ ಆಚಾರ್ಯ ಚಿತ್ರ ತೆರೆಕಾಣಬೇಕಿದೆ. ಇದಲ್ಲದೆ ದುಲ್ಕರ್ ಸಲ್ಮಾನ್ ನಟಿಸಿರುವ ಹೇ ಸಿನಿಮಿಕಾ ಚಿತ್ರದಲ್ಲಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಮಾರ್ಚ್ 3 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲು ಚಿತ್ರ ಸಜ್ಜಾಗಿದೆ.