ಅಭಿಮಾನಿಗ ತಂದಿದ್ದ ಕೇಕ್ ತಿನ್ನಲು ನಿರಾಕರಿಸಿ ಟ್ರೋಲ್ ಆದ ಕಾಜೋಲ್..!
ಮುಂಬೈ: ಬಾಲಿವುಡ್ ನ ದೀವಾ ಕಾಜೋಲ್ ಅಗರ್ ವಾಲ್ ಅವರು ಇತ್ತೀಚೆಗೆ ಅಂದ್ರೆ ಗುರುವಾರ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದರು.. ಈ ವೇಳೆ ಅಭಿಮಾನಿಯೊಬ್ರು ತಂದಿದ್ದ ಕೇಕ್ ಕತ್ತರಿಸಿದ ಕಾಜೋಲ್ ಅದನ್ನ ತಿನ್ನಲು ನಿರಾಕರಿಸಿ ಹಾಗೆಯೇ ಒಳಗೆ ಹೋಗಿದ್ದಾರೆ.. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದ್ದು, ಕಾಜೋಲ್ ನಡೆ ವಿರುದ್ಧ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನ ಹೊರಹಾಕ್ತಾಯಿದ್ದಾರೆ.. ಕೆಲವರು ಕೊರೊನಾ ಟೈಮ್ ನಲ್ಲಿ ಕಾಜೋಲ್ ಮಾಡಿದ್ದು ತಪ್ಪೇನಿಲ್ಲ ಅಂದ್ರೆ ಇನ್ನೂ ಕೆಲವರು ಕಾಜೋಲ್ ವಿರುದ್ಧ ಕೆಂಡ ಕಾರ್ತಿದ್ದಾರೆ.. ಆದ್ರೆ ಈ ವಿಡಿಯೋ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ.
ಕೆಲವರು ಕಾಜೋಲ್‍ಗೆ ದುರಹಂಕಾರ ಎಂದ್ರೆ ಮತ್ತೆ ಕೆಲವರು ನಿಮ್ಮ ಸಮಯ, ಹಣ ಮತ್ತು ಶ್ರಮವನ್ನು ಏಕೆ ವ್ಯರ್ಥಮಾಡಿಕೊಳ್ಳುತ್ತೀರಾ.. ಇವರ ಬದಲಾಗಿ ಅನಾಥ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುವುದು ಉತ್ತಮ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಆಗಸ್ಟ್ 5 ರಂದು ಕಾಜೋಲ್ 47ನೇ ವಸಂತಕ್ಕೆ ಕಾಲಿಟ್ಟಿದ್ದು, ಕಾಜೋಲ್ ಗೆ ವಿಶ್ ಮಾಡಲು ಅಭಿಮಾನಿಯೊಬ್ಬರು ಕೇಕ್ ತಂದಿದ್ದರು. ಆಗ ಕಾಜೋಲ್ ಕೇಕ್ ತಿನ್ನಲು ನಿರಾಕರಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಹಲವಾರು ಅಭಿಮಾನಿಗಳು ಕಾಜೋಲ್ ಮನೆ ಮುಂದೆ ಕೇಕ್ ಹಿಡಿದು ನಿಂತ ಕಾಯುತ್ತಿರುತ್ತಾರೆ. ಈ ವೇಳೆ ಕಾಜೋಲ್ ತಮ್ಮ ಬಾಡಿಗಾಡ್ರ್ಸ್ ಜೊತೆಗೆ ಹೊರಗೆ ಬಂದು ಕೇಕ್ ಕತ್ತರಿಸುತ್ತಾರೆ.
ವೀಡಿಯೋದಲ್ಲಿ ಕಾಜಲ್ ಅಭಿಮಾನಿಯೊಬ್ಬರು ಕೇಕ್ ತಂದು ಬರ್ತ್‍ಡೇ ಸಾಂಗ್ ಹೇಳಿ ವಿಶ್ ಮಾಡುತ್ತಾರೆ. ಈ ವೇಳೆ ಕೇಕ್ ಕತ್ತರಿಸಿ ಮನೆಯೊಳಗೆ ಹೋಗಿಬಿಡುತ್ತಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳಲ್ಲಿ ಒಬ್ರು ಒಂದು ಪೀಸ್ ಕೇಕ್ ನೀಡುತ್ತಾರೆ. ಆದರೆ ಕಾಜಲ್ ಅದನ್ನು ಸ್ವೀಕರಿಸದೇ ಬೇಡ ಎಂದು ನಿರಾಕರಿಸುತ್ತಾರೆ. ಕಾಜಲ್‍ರ ಈ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.