ದೇವರಿಗೆ ಹರಕೆ ತೀರಿಸಿ ಹಿಂತಿರುಗುವಾಗ ಅಫಘಾತ – 3 ಸಾವು…
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಯುವಕರು ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದ ಬಳಿ ನಡೆದಿದೆ.
ದೇವರ ಹರಕೆ ತೀರಿಸಲು ಹೋಗಿದ್ದ ಮೂವರು ಯುವಕರು ವಾಪಸ್ ಹಿಂತಿರುಗುವಾಗ ಈ ಘಟನೆ ನಡೆದಿದೆ. ಕಮಲಾಪುರ ತಾಲ್ಲೂಕಿನ ಗೋಗಿ ತಾಂಡಾ ನಿವಾಸಿಗಳಾದ ದೀಪಕ್ (45), ಯುವರಾಜ್ (17) ರಾಹುಲ್ (17) ಮೃತ ದುರ್ಧೈವಿಗಳು.
ನಿನ್ನೆ ಗೋಗಿ ತಾಂಡಾದಿಂದ ಸಾವಳಗಿ ತಾಂಡಾಗೆ ದೇವರ ಹರಕೆ ತೀರಿಸಲು ಕುಟುಂಬ ಸಮೇತ ಹೋಗಿದ್ದರು. ದೇವರ ಹರಕೆ ತೀರಿಸಿದ ಬಳಿಕ ಕುಟುಂಬಸ್ಥರು ಕ್ರೂಸರ್ ವಾಹನದಲ್ಲಿ ವಾಪಸ್ ಆಗಿದ್ದರು. ದೀಪಕ್, ಯುವರಾಜ್ ಮತ್ತು ರಾಹುಲ್ ಮೂವರು ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ವಾಪಸ್ ಊರಿಗೆ ಬರುತ್ತಿದ್ದಾಗ, ನಾವದಗಿ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
kalburgi : Accident while returning from worshiping God – 3 dead…