ಚುನಾವಣೆ ನಂತರ ಕಾಂಗ್ರೆಸ್ ಮನೆಯಲ್ಲಿ ಕೂಡುವುದು ಗ್ಯಾರಂಟಿ ಐತಿ – ಬಸವನಗೌಡ ಪಾಟೀಲ್ ಯತ್ನಾಳ್
Kalburgi: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಮನೆಯಲ್ಲಿ ಕುಂತರೂ ಗೆದ್ದು ಬರುತ್ತೇವೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿಕೆ ಬಿಜೆಪಿ ಶಾಸಕ ಯತ್ನಾಳ ಕಲಬುರುಗಿಯಲ್ಲಿ ತಿರುಗೇಟು ನೀಡಿದ್ದಾರೆ.
ಅವರು ಮನೆಯಲ್ಲಿ ಕೂಡುವುದು ಗಚ್ಚಿಐತಿ ಅದಕ್ಕೆ ಮನ್ಯಾಗ ಕೂಡತಿವಿ ಅಂದಾರ, ಅವರಿಗೆ ಅನಿಸಿಬಿಟ್ಟಿದೆ ಮುಂದಿನ ಚುನಾವಣೆ ನಂತರ ಮನ್ಯಾಗ ಕುಂಡ್ರುದು ಗ್ಯಾರಂಟಿ ಐತಿ ಅಂತ. ಅದಕ್ಕೆ ಚುನಾವಣೆಯಲ್ಲಿ ಪ್ರಚಾರ ಮಾಡ್ಕೋತ ಯಾಕ ಅಡ್ಯಾಡಬೇಕು ಅದಕ್ಕೆ ಮನ್ಯಾಗ ಕುಂಡರತಿವಿ ಅಂದಾರ.
ಅವರಲ್ಲಿ ಮೊದಲು ಮುಖ್ಯಮಂತ್ರಿ ಕ್ಯಾಂಡಿಡೆಡ್ ಯಾರು ಎಂಬುದೆ ಕ್ಲೀಯರ್ ಇಲ್ಲ. ಸಿದ್ದರಾಮಯ್ಯ ಆಗ್ತಾರೋ, ಡಿ.ಕೆ.ಶಿವಕುಮಾರ್ ಆಗ್ತಾರೋ, ಮತ್ಯಾರ ಆಗ್ತಾರೋ ಗೊತ್ತಿಲ್ಲ. ಅದಕ್ಕೆ ಸಿದ್ದರಾಮಯ್ಯ ನವರು ಹತಾಶೆಯಿಂದ ಹೀಂಗ ಹೇಳಿದ್ದಾರೆ.
ಅವರ ಹೇಳಿಕೆ ಹುರುಪಿನಿಂದ ಒವರ್ ಕಾನ್ಪಡೆನ್ಸ್ ನಿಂದ ಹೇಳಿದ್ದಲ್ಲ, ಮನ್ಯಾಗ ಕುಂಡ್ರುದ ಗ್ಯಾರಂಟಿ ಐತಿ ಅಂತಲೇ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ನವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯತ್ನಾಳ ತಿರುಗೇಟು ನೀಡಿದ್ದಾರೆ.
Kalburgi: After the election, Congress will stay at home – Basavanagowda Patil Yatnal