Kalburgi : ಹೆಂಡತಿ ಮೈ ಬಣ್ಣ ಕಪ್ಪು ಎಂದು ಕೊಲೆ ಮಾಡಿದ ಪತಿ..
ಹೆಂಡತಿ ಮೈ ಬಣ್ಣ ಕಪ್ಪು ಎಂದು ಕೊಲೆ ಮಾಡಿದ ಪತಿ
28 ವರ್ಷದ ಪತ್ನಿ ಫರ್ಜಾನಾಳ ಕೊಲೆಗೈದ ಖಾಜಾ ಪಟೇಲ್
ಕಲಬುರಗಿಯ ಜೇವರ್ಗಿ , ಕೆಲ್ಲೂರು ಗ್ರಾಮದಲ್ಲಿ ಘಟನೆ
ಪತ್ನಿ ಬೆಳ್ಳಗಿಲ್ಲ ಎಂದು ಸದಾ ನಿಂದಿಸುತ್ತಿದ್ದ ಆರೋಪಿ
ತಲೆ ಮರೆಸಿಕೊಂಡಿರುವ ಆರೋಪಿ ಪತಿ , ಕುಟುಂಬಂಸ್ಥರು
ಹೆಂಡತಿ ಬೆಳ್ಳಗಿಲ್ಲ ಎಂಬ ಕಾರಣಕ್ಕೆ ಆಕೆಯನ್ನ ಪತಿಯೇ ಕೊಲೆ ಮಾಡಿರುವ ಘಟನೆ ಕಲಬುರಗಿಯ ಜೇವರ್ಗಿ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ..
28 ವರ್ಷದ ಪತ್ನಿ ಫರ್ಜಾನಾಳನ್ನ ಕತ್ತು ಹಿಸುಕಿ ಆರೋಪಿ ಖಾಜಾ ಪಟೇಲ್ ಕೊಲೆ ಮಾಡಿದ್ದಾನೆ..
ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ಖಾಜಾ ಫರ್ಜಾನಾಳನ್ನು ಆಕೆಯ ಚರ್ಮದ ಬಣ್ಣಕ್ಕಾಗಿ ಚಿತ್ರಹಿಂಸೆ ನೀಡುತ್ತಿದ್ದ ಮತ್ತು ಆಕೆಯ ಮುಖಕ್ಕೆ ಎಷ್ಟೇ ಪೌಡರ್ ಹಚ್ಚಿದರೂ ಹೀರೋಯಿನ್ ಲುಕ್ ಸಿಗುವುದಿಲ್ಲ ಎಂದು ಆಕೆಯನ್ನು ಸದಾ ನಿಂದಿಸುತ್ತಿದ್ದ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಈ ವಿಷಯವನ್ನು ಫರ್ಜಾನಾ ತನ್ನ ಪೋಷಕರ ಗಮನಕ್ಕೆ ತಂದಿದ್ದಳು. ಇನ್ನೂ ಖಾಜಾ ಮತ್ತು ಅವರ ಕುಟುಂಬದ ಸದಸ್ಯರು ಸಂತ್ರಸ್ತೆಯನ್ನು ಹೆಚ್ಚಿನ ವರದಕ್ಷಿಣೆಗಾಗಿ ಒತ್ತಾಯಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಕೆಲ್ಲೂರಿನ ಹಾಲಿನ ವ್ಯಾಪಾರಿಯೊಬ್ಬರು ಫರ್ಜಾನಾ ಸಾವಿನ ಬಗ್ಗೆ ಖುರ್ಷಿದ್ ಅವರಿಗೆ ಫೋನ್ ಮೂಲಕ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಅವರು ಫರ್ಜಾನಾಳ ಪೋಷಕರೊಂದಿಗೆ ಕೆಲ್ಲೂರಿಗೆ ಧಾವಿಸಿದಾಗ ಶವದ ಪಕ್ಕದಲ್ಲಿ ಇಬ್ಬರು ಮಕ್ಕಳನ್ನು ಕಂಡುಕೊಂಡರು.
ಆರೋಪಿ, ಕುಟುಂಬದವರು ಪರಾರಿಯಾಗಿದ್ದಾರೆ..
ಖಾಜಾ ಪಟೇಲ್ ವಿರುದ್ಧ ಕುಟುಂಬದವರು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ.
Kalburgi : Husband killed wife because of colour complex