ಕೊಪ್ಪಳ: ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಸಚಿವ ಬಿ ಸಿ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಜಿ.ಪಂ.ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಜಿಲ್ಲಾಧಿಕಾರಿ ವಿಕಾಸ್ ಸೇರಿದಂತೆ ಹಲವರು ಬಾಗಿಯಾಗಿದ್ದರು.
ಧ್ವಜಾರೋಹಣದ ಬಳಿಕ ಬಳಿಕ ಮಾತನಾಡಿದ ಬಿ.ಸಿ ಪಾಟೀಲ್ ಅವರು ಕಲ್ಯಾಣ ಕರ್ನಾಟಕ ಭಾಗ ಹಿಂದಿಗಿಂತಲೂ ಈಗ ಹೆಚ್ಚು ಹಸಿರಾಗಿದ್ದು, ಫಲವತ್ತಾಗಿದೆ. ಈ ಭಾಗದ ಜನ ತಾವು ಹಿಂದುಳಿದವರೆಂಬ ಕೀಳರಿಮೆ ಬಿಡಬೇಕು ಎಂದು ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದ್ದಾರೆ.
ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಎರಡುಬಾರಿ ಧ್ವಜಾರೋಹಣ ನೆರವೇರಿಸುತ್ತವೆ. ಆದರೆ ಈ ಭಾಗದಲ್ಲಿ ವರ್ಷಕ್ಕೆ ಮೂರು ಬಾರಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ ನಲ್ಲಿ 1500ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದ್ದಾರೆ.
ಇನ್ನೂ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಕೋರಿದ ಬಿ.ಸಿ.ಪಾಟೀಲ್ ಅವರು , ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1 ಲಕ್ಷ ರೂ ಕೃಷಿ ಮೂಲಭೂತ ಸೌಕರ್ತಗಳಿಗಾಗಿ ಮೀಸಲಿಟ್ಟಿದ್ದಾರೆ. ಈ ಪೈಕಿ 10 ಸಾವಿರ ಕೋಟಿ ರೂಪಾಯಿ ಆಹಾರ ಸಂಸ್ಕರಣಾ ಘಟಕಗಳಿಗಾಗಿ ಮೀಸಲಿಡುವ ಮೂಲಕ ರೈತರಿಗೆ ಬೆನ್ನೆಲೆಬಾಗಿ ನಿಂತಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.