Kamal | ರಜಿನಿ ಜೊತೆ ಸಿನ್ಮಾ ಮಾಡ್ತೀರಾ..? ಕಮಲ್ ಉತ್ತರವೇನು ಗೊತ್ತಾ..?
ತಮಿಳುನಾಡು : ಪ್ರಪಂಚಕ್ಕೆ ಬೆಳಕು ನೀಡುವ ಸೂರ್ಯನಿಗೆ ಉತ್ತರ ದಕ್ಷಿಣಗಳು ಇದ್ದಂತೆ ಸಿನಿ ರಂಗದಲ್ಲಿ ಸಕ್ಸಸ್ ಬದಲಾಗುತ್ತಲೇ ಇರುತ್ತದೆ ಎಂದು ನಟ, ನಿರ್ಮಾಪಕ ಕಮಲ್ ಹಾಸನ್ ಹೇಳಿದ್ದಾರೆ.
ಕಮಲ್ ಹಸನ್ ನಾಯಕರಾಗಿ ನಟಿಸಿದ ವಿಕ್ರಂ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಚಿತ್ರ ಬಿಡುಗಡೆಯಾದ ಎಲ್ಲ ಕಡೆ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ.
ಈ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್, ನಿರ್ದೇಶಕ ಲೋಕೆಷ್ ಕನಕರಾಜ್ ಗುರುವಾರ ಚೆನ್ನೈ ನಲ್ಲಿ ಸಕ್ಸಸ್ ಮೀಟ್ ನಡೆಸಿದರು.

ಈ ವೇಳೆ ಕಮಲ್ ಮಾತನಾಡಿ, ಸಿನಿಮಾವನ್ನು ಇಷ್ಟು ದೊಡ್ಡ ಯಶಸ್ಸು ಗೊಳಿಸಿದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಒಳ್ಳೆ ಯಶಸ್ಸನ್ನು ಸಾಧಿಸಿದ್ದೇನೆ.
ಇದು ಸಾಕು ಎಂದು ನಾನು ಎಂದೂ ಹೇಳುವುದಿಲ್ಲ. ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಜನರಿಗಾಗಿ ನೀಡುವುದೇ ನನ್ನ ಧ್ಯೇಯ ಎಂದಿದ್ದಾರೆ.
ಇದೇ ವೇಳೆ ರಜಿನಿ ಕಾಂತ್ ಜೊತೆ ಸಿನಿಮಾ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, ಅದಕ್ಕೆ ನಾನು ಯಾವಾಗಲು ಸಿದ್ಧ.
ರಜನಿಕಾಂತ್ ಅವರಿಗೆ ನಿರ್ದೇಶಕರು ಕಥೆ ಹೇಳಿ ಒಪ್ಪಿಸಿದ್ರೆ, ಹಾಗೆ ಕಥೆ ನನಗೆ ಇಷ್ಟವಾದ್ರೆ ಖಂಡಿತ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.