Kamal Haasan : ವಿಕ್ರಂ ಸಕ್ಸಸ್ ಬೆನ್ನಲ್ಲೇ ಕಮಲ್ ಗೆ ನೋಟೀಸ್
ಯೂನಿವರ್ಸಲ್ ಸ್ಟಾರ್ ಕಮಲ್ ಹಸನ್ ಸುಮಾರು ನಾಲ್ಕು ವರ್ಷಗಳ ಬಳಿಕ ಮ್ಯಾಸಿವ್ ಕಮ್ ಬ್ಯಾಕ್ ಮಾಡಿದ ಸಿನಿಮಾ ವಿಕ್ರಂ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿದೆ.
ಫಹಾದ್ ಫಾಜಿಲ್, ವಿಜಯ್ ಸೇತುಪತಿ, ಸೂರ್ಯ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಜೂನ್ ಮೂರರಂದು ರಿಲೀಸ್ ಆದ ಈ ಸಿನಿಮಾ ನಿರೀಕ್ಷೆಗಳಿಗೂ ಮೀರಿ ಪ್ರದರ್ಶನ ಕಾಣುತ್ತಿದೆ.
ಸದ್ಯ ಬಾಕ್ಸ್ ಆಫೀಸ್ ನಲ್ಲಿ ನಾನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಪ್ರಸ್ತುತ ಈ ಸಿನಿಮಾದ ಖುಷಿಯಲ್ಲಿರುವ ಕಮಲ್ ಹಾಸನ್ ಗೆ ಶಾಕ್ ಎದುರಾಗಿದೆ.
ಕಮಲ್ ಹಾಸನ್ ಮನೆಯನ್ನು ತಮಿಳುನಾಡು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದಕ್ಕಾಗಿಯೇ ತಮಿಳುನಾಡು ಸರ್ಕಾರ ಕಮಲ್ ಗೆ ನೋಟೀಸ್ ಗಳನ್ನು ನೀಡಿದೆ ಎಂದು ಕಾಲಿವುಡ್ ಮೀಡಿಯಾದಲ್ಲಿ ನ್ಯೂಸ್ ಬಂದಿದೆ.
ಪ್ರಸ್ತುತ ಚೆನ್ನೈನಲ್ಲಿ ಎರಡನೇ ಭಾಗದ ಮೆಟ್ರೋ ಕಾಮಗಾರಿ ನಡೆಸುತ್ತಿದ್ದಾರೆ.
ಇದರ ಭಾಗವಾಗಿ ಅಲ್ವಾರ್ ಪೇಟೆ ಸ್ಟೇಷನ್ ಕಮಲ್ ಹಾಸನ್ ನಿವಾಸದ ಬಳಿಯಿಂದಲೇ ಸಾಗಲಿದೆ.
ಈ ಸ್ಟೇಷನ್ ನಿರ್ಮಾಣಕ್ಕಾಗಿ ಕಮಲ್ ಭವನದಲ್ಲಿ 170 ಚದರ ಅಡಿಗಳು ಬೇಕಾಗಿದೆ.
ಈ ಜಾಗಕ್ಕಾಗಿ ಕಮಲ್ ಗೆ ಸರಕಾರ ನೋಟಿಸ್ ನೀಡಿದೆಯಂತೆ.