ಸಲ್ಮಾನ್ ಖಾನ್ ವಿರುದ್ಧ ಸಂಘರ್ಷಕ್ಕೆ ಇಳಿದ ವಿಮರ್ಶಕ – ಕಮಾಲ್ ಗೆ ಗೋವಿಂದ ಸಾಥ್..!
ಸಲ್ಮಾನ್ ಖಾನ್ ಬಾಲಿವುಡ್ ನ ಗೂಂಡಾ… ಆತನ ಕರೆಯರ್ ನಾಶ ಮಾಡ್ತೇನೆ ಎಂದು ಇತ್ತೀಚೆಗೆ ವಿರಮರ್ಶಕ ಕಮಾಲ್ ಖಾನ್ ಅವರು ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಜ್ಞೆ ಮಾಡಿದ್ದು , ಸಲ್ಮಾನ್ ಅಭಿಮಾನಿಗಳು ರೊಚ್ಚಿಗೇಳ್ತಿದ್ದಂತೆ ತಮ್ಮ ಟ್ವಿಟ್ಟರ್ ಅಕೌಂಟ್ ಲಾಕ್ ಮಾಡಿಕೊಂಡಿದ್ದಾರೆ.
ಆದ್ರೆ ಬಾಲಿವುಡ್ ಬ್ಯಾಡ್ ಬಾಯ್ , ಬಿಟೌನ್ ನ ಸುಲ್ತಾನನ್ನ ಎದುರಾಕಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಅವರ ಹಿಂದೆ ಇಂಡಸ್ಟ್ರಿಯ ಕಾಣದ ಕೈಗಳೇ ಸಹಾಯಕ್ಕೆ ನಿಂತಿರಬಹುದೆಂಬ ಪ್ರಶ್ನೆಗಳು ಮೂಡಿವೆ. ಆದ್ರೆ ಇದೀಗ ಟ್ವಿಟ್ಟರ್ ನಲ್ಲಿ ಬಾಲಿವುಡ್ ನ ಸ್ಟಾರ್ ನಟ ಗೋವಿಂದ ಅವರಿಗೆ ಧನ್ಯವಾದ ಹೇಳಿರುವುದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ.
ಸಲ್ಮಾನ್ ಕುರಿತಾಗಿ ಟ್ವೀಟ್ ಮಾಡಿದ ಬಳಿಕ ಟ್ವೀಟ್ ಮಾಡಿರುವ ಕಮಾಲ್ ಆರ್ ಖಾನ್, ‘ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಗೋವಿಂದ ಭಾಯ್. ನಿಮ್ಮ ನಿರೀಕ್ಷೆಯನ್ನು ನಾನು ಹುಸಿಗೊಳಿಸುವುದಿಲ್ಲ‘ ಎಂದಿದ್ದಾರೆ. ಹೀಗಾಗಿ ಕಮಾಲ್ ಗೆ ನಟ ಗೋವಿಂದ ಸಹಾಯ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಈ ವ್ಯಕ್ತವಾಗಿದೆ.
ಜಗಳ ಶುರುವಾಗಿದ್ದೇಕೆ..?
ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಆಗಿ ನಿರೀಕ್ಷೆ ಮಟ್ಟದಲ್ಲಿ ಸಫಲತೆ ಕಾಣುವಲ್ಲಿ ವಿಫಲವಾದ ಸಲ್ಮಾನ್ ಕಾನ್ ಅಭಿನಯದ ರಾಧೆ ಸಿನಿಮಾದ ಬಗ್ಗೆ ಕಮಾಲ್ ಖಾನ್ ವಿಮರ್ಶೆ ನೀಡಿದ್ದರು. ಹೀಗೆ ರಿವೀವ್ ನೀಡುವ ವೇಳೆ ‘ರಾಧೆ‘ ಸಿನಿಮಾವು ಅತ್ಯಂತ ಕೆಟ್ಟ ಸಿನಿಮಾ ಎಂದು ಹೇಳಿದ್ದರು. ವಿಮರ್ಶೆ ಮಾಡುತ್ತಾ ಕಣ್ಣೀರು ಹಾಕಿದ್ದ ಕಮಾಲ್ , ನಾನು ಇನ್ನೂ ಅರ್ಧ ಸಿನಿಮಾ ನೋಡುವುದು ಬಾಕಿ ಇದೆ. ನನಗೆ ಈಗಲೇ ಭಯವಾಗುತ್ತಿದೆ. ಮನೆಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು 2 ದಿನ ವಿಶ್ರಾಂತಿ ಪಡೆಯುತ್ತೇನೆ‘ ಎಂದಿದ್ದರು.ಇದಾದ ಬಳಿಕ ಸಲ್ಮಾನ್ ಖಾನ್, ಕಮಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದಾದ ನಂತರ ರೊಚ್ಚಿಗೆದ್ದ ಕಮಾಲ್ ‘ನಾನು ಸಲ್ಮಾನ್ ಖಾನ್ ವೃತ್ತಿ ಜೀವನವನ್ನು ನಾಶ ಮಾಡುತ್ತೇನೆ‘ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಪ್ರತಿಜ್ಞೆ ಮಾಡಿದ್ರು.