‘ರಿಪ್ಪಡ್ ಜೀನ್ಸ್ ನಲ್ಲಿ ಯುವಕರು ಭಿಕ್ಷುರಂತೆ ಕಾಣ್ತಾರಂತೆ’..!
ಕಂಗನಾ ಏನೇ ಹೇಳಿಕೆ ನೀಡಲಿ ಅದು ಜನರಿಗೆ ಶರವೇಗದಲ್ಲಿ ರೀಚ್ ಆಗುತ್ತೆ. ಅದುಕ್ಕೆ ಕಾರಣ ಅವರ ವಿವಾದಾತ್ಮಕ ಹೇಳಿಕೆಗಳೇ ಅನ್ನಬಹುದು. ಕಾಂಟ್ರವರ್ಸಿ ಕ್ವೀನ್ ಕಂಗನಾ ಸುಖಾ ಸುಮ್ಮನೆ ಏನಾದ್ರೂ ಟ್ವೀಟ್ ಮಾಡುತ್ತಾ ಟ್ರೋಲಿಗರ ಪಾಲಿಗೆ ಆಹಾರವಾಗುತ್ತಾರೆ.
ಇಂತಹದ್ದೇ ಒಂದು ಹೇಳಿಕೆ ಇಡೀ ತನ್ನ ಕಾಲಿನ ಮೇಲೆ ಚಪ್ಪಡಿ ಎಳೆದುಕೊಂಡು ಮುಖಭಂಗ ಅನುಭವಿಸಿದ್ದಾರೆ. ಹೌದು.. ರಿಪ್ಪಡ್ (Ripped jeans) ಬಗ್ಗೆ ಮಾತನಾಡಿರೋ ಕಂಗನಾ ‘ರಿಪ್ಡ್ ಜೀನ್ಸ್ ತೊಡುವ ದೇಶದ ಬಹುಪಾಲು ಯುವ ಜನರು ಭಿಕ್ಷಕುರಂತೆ ಕಾಣುತ್ತಾರೆ’ ಎಂದು ಟ್ವೀಟ್ ಮಾಡಿ ನೆಟ್ಟಿಗರಿಂದ ಮತ್ತೆ ಉಗಿಸಿಕೊಳ್ತಿದ್ಧಾರೆ.
ಇತ್ತೀಚೆಗೆ ರಿಪ್ಡ್ ಜೀನ್ಸ್ ತೊಡುವ ಮಹಿಳೆಯರು ಸಮಾಜಕ್ಕೆ ಏನು ಸಂದೇಶ ನೀಡಬಲ್ಲರು ಎಂದು ಹೇಳಿದ್ದರು. ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿತ್ತು. ಆದ್ರೆ ಕೆಲ ಬಿಜೆಪಿ ಬೆಂಬಲಿಗರು ಮಾತ್ರವೇ ಇದಕ್ಕೆ ಬೆಂಬಲ ಸೂಚಿಸಿದ್ದರು. ಇವರಲ್ಲಿ ಒಬ್ಬರು ಕಂಗನಾ.
ಉತ್ತರಾಖಂಡ್ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಂಗನಾ ಇಂತಹದೊಂದು ಹೇಳಿಕೆ ನೀಡಿದ್ದಾರೆ. ಆದ್ರೆ ಹೇಳೋ ಬಾರಿ ನೂರು ಸಾರಿ ನಾವು ಸರಿ ಇದ್ದೇವಾ , ಪ್ರಪಂಚಕ್ಕೆ ಬುದ್ದಿ ಹೇಳ್ತಿದ್ದೀವಿ ನಮ್ಮ ಬಾಳು ಹೇಗಿದೆ ಅಂತ ತಿಳಿದುಕೊಳ್ಳೋ ಅನ್ನೋ ಮಾತನ್ನ ಮರೆತುಬಿಟ್ಟಿದ್ದಾರೆ ಅನ್ಸುತ್ತೆ. ಯಾಕಂದ್ರೆ ಈ ಹೇಳಿಕೆ ಅವರಿಗೆ ತಿರುಗುಬಾಣವಾಗಿದೆ.
ಹೌದು ಹುಚ್ಚುಚ್ಚಾಗಿ ತಮ್ಮನ್ನ ತಾವು ಹೊಗಳಿಕೊಳ್ಳೋ ಕಂಗನಾ ಬಹುತೇಕ ಯುವಕರು ಹುಯಚ್ಚರಂತೆ ಕಾಣಿಸ್ತಾರೆ. ರಿಪ್ಪಡ್ ಜೀನ್ಸ್ ಧರಿಸುವವರೆಲ್ಲಾ ನನ್ನ ತರ ಕೂಲ್ ಆಗಿ ಕಾಣಿಸೋದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ನೆಟ್ಟಿಗರ ಪಿತ್ತ ಮತ್ತಷ್ಟು ನೆತ್ತಿಗೇರಿಸಿದೆ.
ಅಂದ್ಹಾಗೆ ಕಂಗನಾ ಟ್ವಿಟ್ ಮಾಡಿ ಅದರ ಜೊತೆಗೆ ಹಾಕಿರೋ ಫೋಟೋ ಇನ್ನೂ ಸಿಟ್ಟು ತರಿಸುತ್ತೆ.. ರಿಪ್ಪಡ್ ಜೀನ್ಸ್ ಹಾಕಿರುವ ಫೋಟೋ ಹಂಚಿಕೊಂಡು ಬಹುತೇಕ ಯುವಕರು ಭಿಕ್ಷುಕರಂತೆ ಕಾಣ್ತಾರೆ ಅಂದ್ರೆ ಏನರ್ಥ. ಅವರೆಲ್ಲ ಭಿಕ್ಷುಕರ ತರ ಕಾಣ್ತಾರೆ. ನಾನು ತುಂಬಾ ಕೂಲ್ ಆಗಿ ಕಾಣ್ತೀನಿ. ಅವರೆಲ್ಲ ನನ್ನಂತೆ ಕಾಣಿಸುವುದಿಲ್ಲ ಎನ್ನುವ ರೀತಿ ಟಾಂಟ್ ಕೊಟ್ಟಿರೋ ಹಾಗಿದೆ. ಕಂಗನಾ ಮತ್ತೆ ಮಾಮೂಲಿಯಂತೆ ಟ್ರೋಲ್ ಪೇಜ್ ಗಳಲ್ಲಿ ರಾರಾಜಿಸುತ್ತಿದ್ದಾರೆ.
BIGGBOSS 8 : ರಘು ಗೌಡ ಈಗ ನಿಜವಾಗಿ ಆಟ ಆಡಲು ಶುರುಮಾಡಿದ್ದಾರೆ : ರಘುಗೌಡ ಪತ್ನಿ ವಿದ್ಯಶ್ರೀ
BIGGBOSS 8 : ಬಿಗ್ ಬಾಸ್ ಮನೆಯಿಂದ ಆಚೆ ಹೋಗುವ 3ನೇ ಸ್ಪರ್ಧಿ ಯಾರು..?