Kanagana
ಅಮೆರಿಕಾದ ನೂತನ ಅಧ್ಯಕ್ಷರಾಗಿರುವ ಜೋ ಬಿಡೆನ್ ಅವರಿಗೆ ವಿಶ್ವದಾದ್ಯಂತದಿಂದ ಹಲವು ಗಣ್ಯರು ಶುಭಾಷಯಗಳನ್ನ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ವಿಷ್ ಮಾಡ್ತಿದ್ದಾರೆ. ಅದರಂತೆ ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರೋ ಬಾಲಿವುಡ್ ನಟಿ ಕಂಗನಾ ರಣಾವತ್ ಸಹ ಬಿಡೆನ್ ಅಧ್ಯಕ್ಷರಾಗಿ ಚುನಾಯಿತರಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಣಾವತ್ ”ಬೈಡನ್ ಓರ್ವ ಗಜಿನಿ, ಪ್ರತಿ ಐದು ನಿಮಷಕ್ಕೊಮ್ಮೆ ಅವರ ಡೇಟಾ ಕ್ರ್ಯಾಶ್ ಆಗುತ್ತದೆ” ಎಂದು ಟೀಕಿಸಿದ್ದಾರೆ.
ಹೌದು ಇದೇ ವೇಳೆ ”ಬೈಡನ್‌ಗೆ ನೀಡಿದ ಎಲ್ಲ ಔಷಧಿಗಳು ಪರಿಣಾಮಕಾರಿಯಾಗಿಲ್ಲ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇದು ಕೆಲಸ ಮಾಡಲ್ಲ. ನಿಶ್ಚಿತವಾಗಿ ಕಮಲಾ ಹ್ಯಾರೀಸ್ ನಿಜವಾದ ಅಧ್ಯಕ್ಷೆ” ಎಂದು ಪರೋಕ್ಷವಾಗಿ ಕಮಲಾ ಹ್ಯಾರಿಸ್ ಅಧ್ಯಕ್ಷೆ ಗಾದೆಗೆ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ”ಒಬ್ಬ ಮಹಿಳೆ ಉತ್ತುಂಗಕ್ಕೆ ಏರಿದಾಗ, ಇತರೆ ಮಹಿಳೆಯರಿಗೆ ಆಕೆ ದಾರಿಯಾಗುತ್ತಾಳೆ” ಎಂದು ಹೇಳುವ ಮೂಲಕ ಕಮಲಾ ಹ್ಯಾರೀಸ್ ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆ ಆಗಿ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
Kanagana
‘ಕಿರಾತಕ-2’ ಚಿತ್ರೀಕರಣ ಕಂಪ್ಲೀಟ್ : ಯಶ್ ಅಭಿಮಾನಿಗಳಿಗೆ ಬಿಗ್ ಶಾಕ್..!
ಶಂಕರಣ್ಣನ 66ನೇ ಹುಟ್ಟುಹಬ್ಬ : ‘ಆಟೋರಾಜ’ನ ನೆನೆದ ರಾಜಕೀಯ ಗಣ್ಯರು
‘ಮರೆಯದ ಮಾಣಿಕ್ಯ’ ಶಂಕರಣ್ಣನ ನೆನೆದ ಸಿನಿಮಾ ತಾರೆಯರು..!
ಕನ್ನಡದ ಮರೆಯದ ಮಾಣಿಕ್ಯ ಶಂಕರಣ್ಣ: ‘ಸಾಂಗ್ಲಿಯಾನ’ನ ನೆನೆದ ಕರುನಾಡು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel