Bollywood – ಕಥಿಯಾವಾಡಿ ವಿರುದ್ಧ ಕೆಂಗಣ್ಣು ಬೀರಿದ ಕಂಗಾನಾ…!!!!
ಕಂಗನಾ ರಣಾವತ್ ನೀಡುವ ಹೇಳಿಕೆಗಳು ಯವಾಗಲೂ ಬೆಂಕಿ ಕಿಡಿಗಳಂತಿರುತ್ತವೆ. ತನ್ನ ಹೇಳಿಕೆಗಳಿಂದ ಯಾವಾಗಲೂ ಚರ್ಚೆಯಲ್ಲಿ ಉಳಿಯುವ ಕಂಗಾನಾ ಇತ್ತೀಚೆಗೆ ಆಲಿಯಾ ಭಟ್ ನಟಿಸಿರುವ ‘ಗಂಗೂಬಾಯಿ ಕಥಿಯಾವಾಡಿ’ ಪ್ರಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾಳೆ.
ಆಲಿಯಾ ಚಿತ್ರದ ಡೈಲಾಗ್‌ನ್ನು ಹುಡುಗಿಯೊಬ್ಬಳು ಹೇಳುವ ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ಕಂಗನಾ ತಮ್ಮ ಪ್ರತಿಕ್ರಿಯೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ, ನಟಿ ದೀಪಿಕಾ ಪಡುಕೋಣೆ ಅವರ ‘ಗಹ್ರೇಯಾನ್’ ಚಿತ್ರಕ್ಕೂ ಕಂಗಾನ ಪ್ರತಿಕ್ರಿಯೆಯನ್ನು ನೀಡಿದ್ದಳು. ಚಿತ್ರದ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಎಂದು ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಪ್ರಕಾರ ‘ಇಂತಹ ಚಿತ್ರದ ಪ್ರಚಾರದಿಂದ ಹಣ ಗಳಿಸಲು ಅಪ್ರಾಪ್ತ ಮಕ್ಕಳಿಗೆ ಕಿರುಕುಳ ನೀಡುವ ಎಲ್ಲಾ ಪೋಷಕರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ತಮ್ಮ ಶಕ್ತಿಯನ್ನು ಹೆಚ್ಚಿಸಲು ಹುಡುಗಿಯರನ್ನು ಸರಬರಾಜು ಮಾಡಿದ ಪ್ರಸಿದ್ಧ ವೇಶ್ಯೆ ಮತ್ತು ಆಕೆಯ ಪಿಂಪ್ ಅವರ ಜೀವನಚರಿತ್ರೆ ಇದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಜೀ ಅವರು ಈ ವಿಷಯವನ್ನು ದಯವಿಟ್ಟು ಗಮನಿಸಿ ಎಂದು ಟ್ವೀಟ್ ಮಾಡಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋ ಕುರಿತು ಕಂಗನಾ ಬರೆದುಕೊಂಡಿದ್ದು, ‘ಈ ಹುಡುಗಿ ತನ್ನ ಬಾಯಲ್ಲಿ ಬೀಡಿ ಹಾಕಿಕೊಂಡು ಅಶ್ಲೀಲ ಡೈಲಾಗ್ ಹೊಡೆಯುವ ಲೈಂಗಿಕ ಕಾರ್ಯಕರ್ತೆಯನ್ನ ಅನುಕರಿಸಬೇಕೇ? ಅವಳ ದೇಹ ಭಾಷೆ ನೋಡಿ? ಈ ವಯಸ್ಸಿನಲ್ಲಿ ಲೈಂಗಿಕತೆಯನ್ನು ತೋರಿಸುವುದು ಸರಿಯೇ? ಇನ್ನೂ ನೂರಾರು ಮಕ್ಕಳು ಹೀಗೆ ಬಳಕೆಯಾಗುತ್ತಿದ್ದಾರೆ. ಎಂದು ಕಂಗಾನ ಟೀಕಿಸಿದ್ದಾಳೆ.
ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ ಫೆಬ್ರವರಿ 25 ರಂದು ಥಿಯೇಟರ್‌ಗೆ ಕಾಲಿಡಲಿದೆ. ಇದನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ವಿಜಯ್ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಅಧ್ಯಾಯವನ್ನು ಆಧರಿಸಿದೆ, ಇದು ಕಾಮತಿಪುರದ ಗಂಗೂಬಾಯಿ ಕಥಿಯಾವಾಡಿ ಜೀವನದ ಬಗ್ಗೆ ಹೇಳುತ್ತದೆ.