ದೇವರೆ…ಈ ವರ್ಷ ಕಡಿಮೆ ಎಫ ಐ ಆರ್ ದಾಖಲಾಗಲಿ – ಕಂಗಾನ

1 min read

ದೇವರೆ…ಈ ವರ್ಷ ಕಡಿಮೆ ಎಫ ಐ ಆರ್ ದಾಖಲಾಗಲಿ –  ಕಂಗಾನ

ನಟಿ ಕಂಗಾನ ರಾಣಾವತ್ ತಮ್ಮ ಹೊಸ ವರ್ಷವನ್ನ ತಿರುಪತಿ ಬಾಲಾಜಿ ದರ್ಶನ ಪಡೆಯುವ ಮೂಲಕ ಬರಮಾಡಿಕೊಂಡಿದ್ದಾರೆ.  ಅಲ್ಲದೇ ತಿರುಪತಿಗೆ ಸಮೀಪದಲ್ಲಿರು ರಾಹು ಕೇತು ಗ್ರಹಗಳ ದೇವಸ್ಥಾನಕ್ಕೂ ಬೇಟಿ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ.

ನಟಿ ಕಂಗಾನ ತಮ್ಮ ಮೊನಚು ಹೇಳಿಕೆಗಳಿಂದ  ಸದಾ ಒಂದಿಲ್ಲೊಂದು ವಿವಾದಲ್ಲಿರುತ್ತಾರೆ.  ಕಂಗಾನಾ ಮೇಲೆ ಹಲವು ಕೇಸ್ ಸಹ ದಾಖಲಾಗಿವೆ  ಹಾಗಾಗಿ ಈ ವರ್ಷದಲ್ಲಿ ಕಡಿಮೆ ಎಫ್ ಐ ಆರ್ ದಾಖಲಾಗಲಿ ಎಂದು ಬೇಡಿಕೊಂಡಿರುವುದಾಗಿ ನಟಿ ಕಂಗಾನ ಸ್ವತಃ ಇನ್ಸಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.

‘ಜಗತ್ತಿನಲ್ಲಿ ಒಂದೇ ರಾಹು-ಕೇತು ದೇವಾಲಯವಿದೆ. ಇದು ತಿರುಪತಿ ಬಾಲಾಜಿಗೆ ಬಹಳ ಹತ್ತಿರದಲ್ಲಿದೆ. ಅಲ್ಲಿ ಕೆಲವು ವಿಧಿವಿಧಾನಗಳನ್ನು ನಡೆಸಲಾಯಿತು. ಐದು ಧಾತುರೂಪದ ಲಿಂಗಗಳಲ್ಲಿ ವಾಯು ಲಿಂಗದ ರೂಪ ಕೂಡ ಇಲ್ಲಿ ನೆಲೆಗೊಂಡಿದೆ. ಇದು ಸಾಕಷ್ಟು ಅದ್ಭುತವಾದ ಸ್ಥಳವಾಗಿದೆ. ನನ್ನ ಪ್ರಿಯ ಶತ್ರುಗಳಿಗೆ ದಯೆ ತೋರಲು ನಾನು ಇಲ್ಲಿಗೆ ಹೋಗಿದ್ದೆ. ಈ ವರ್ಷ ನನಗೆ ಕಡಿಮೆ ಪೊಲೀಸ್ ದೂರುಗಳು ಮತ್ತು ಎಫ್‌ಐಆರ್‌ಗಳು ದಾಖಲಾಗಲಿ. ಹೆಚ್ಚು ಪ್ರೇಮ ಪತ್ರಗಳು ಬರಲಿ ಎಂದು ನಾನು ಬಯಸುತ್ತೇನೆ. ಜೈ ರಾಹು ಕೇತು ಜೀ. ಎಂದು ಇನ್ಸಟಾಗ್ರಾಂ ನಲ್ಲಿ ಬರೆದು ಕೊಂಡಿದ್ದಾರೆ.

2021 ರ ವರ್ಷವು ಕಂಗನಾಗೆ ಏರಿಳಿತಗಳ ವರ್ಷವಾಗಿದೆ. ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದರೆ.  ಈ ವರ್ಷ ಕಂಗನಾ ಅವರ ಬಹಿರಂಗ ಹೇಳಿಕೆಗಳಿಗಾಗಿ ಅನೇಕ ಎಫ್‌ಐಆರ್‌ಗಳು ದಾಖಲಾಗಿವೆ.  ಅದಕ್ಕಾಗಿಯೇ ಕಂಗನಾ  ಹೊಸ ವರ್ಷವು ಅಂತಹ ತೊಂದರೆಗಳನ್ನು ಎದುರಿಸುವುದು ಬೇಡ ಎಂದು ಬಯಸುತ್ತಿದ್ದಾರೆ.

ಸಧ್ಯ ಕಂಗನಾ ರಣಾವತ್ ತನ್ನ ಪ್ರೊಡಕ್ಷನ್ ಹೌಸ್‌ನ ಮೊದಲ ಚಿತ್ರ ‘ಟಿಕು ವೆಡ್ಸ್ ಶೇರು’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಕಾಣಿಸಿಕೊಳ್ಳಲಿದ್ದಾರೆ. ಕಂಗನಾ ಈ ವರ್ಷ ಅನೇಕ ದೊಡ್ಡ ಚಿತ್ರಗಳಲ್ಲಿ ನಟಿಸಲಿದ್ದಾರೆ. ಅವರ ತೇಜಸ್ ಚಿತ್ರ ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd