kangana ranouth
ಪ್ರಚೋದನಕಾರಿ ಟ್ವೀಟ್‌ಗಳ ಮೂಲಕ ವಿವಾದಗಳನ್ನು ಸೃಷ್ಟಿ ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ಹಾಗೂ ಸಹೋದರಿ ರಂಗೋಲಿಗೆ ಕಂಟಕದ ಮೇಲೆ ಕಂಟಕವೆದುರಾಗುತ್ತಿದೆ. ಇದೀಗ ಇಬ್ಬರ ವಿರುದ್ಧ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಭಗವತ್ ಟಿ ಜಿರಾಪೆ ಸಹ ಮತ್ತೊಂದು ಪ್ರಕರಣದಲ್ಲಿ ಕಂಗನಾ ಹಾಗೂ ಸಹೋದರಿ ವಿರುದ್ಧ ತನಿಖೆ ಮಾಡಿ ಎಂದು ಮುಂಬೈ ಪೊಲೀಸರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೇ ಈ ಸಹೋದರಿಯರ ವಿರುದ್ಧ ವಿವಾದಾತ್ಮಕ ಟ್ವೀಟ್ ಗಳ ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಿ ಎಂದು ಬಾಂಬೆ ಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಕಂಗನಾ ಹಾಗೂ ರಂಗೋಲಿಗೆ ಮತ್ತೊಂದು ಸಂಕಷ್ಟು ಶುರುವಾಗಿದೆ.
ವಕೀಲ ಅಲಿ ಕಾಶಿಫ್ ಖಾನ್ ದೇಶ್ಮುಖ್ ಅವರು ಕಂಗನಾ ಮತ್ತು ರಂಗೋಲಿ ವಿರುದ್ಧ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ”ಆರೋಪಿತರು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದುರುದ್ದೇಶಪೂರಿತವಾಗಿ ದ್ವೇಷವನ್ನು ಹರಡುವುದರ ಮೂಲಕ ಕಾನೂನುಬಾಹಿರ ಮತ್ತು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿದ್ದಾರೆ. ಹಗೆತನದಿಂದ ಪೋಸ್ಟ್ ಮಾಡುವ ಮೂಲಕ ದೇಶದಲ್ಲಿ ಸಾಮರಸ್ಯ ಕದಡುವ ಕೃತ್ಯಗಳನ್ನು ಮಾಡಿದ್ದಾರೆ. ಒಂದು ವರ್ಗದ ಧರ್ಮ , ಧಾರ್ಮಿಕ ಭಾವನೆಗಳನ್ನು ಅವಮಾನಿಸುತ್ತಿದ್ದಾರೆ. ಧಾರ್ಮಿಕ ಭಾವನೆಗಳ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿ ಮಾಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇನ್ನೂ ”ಕಂಗನಾ ಮತ್ತು ರಂಗೋಲಿ ಇಬ್ಬರು ಅನಗತ್ಯ ವಿವಾದಗಳನ್ನು ಹುಟ್ಟುಹಾಕಲು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ಉದ್ಯಮದಿಂದ ನಟ ಹೃತಿಕ್ ರೋಷನ್, ಆದಿತ್ಯ ಪಾಂಚೋಲಿ ವಿರುದ್ಧ ಅಥವಾ ಗೌರವಾನ್ವಿತ ಪತ್ರಕರ್ತ ಸೇರಿದಂತೆ ದೊಡ್ಡ ಸಮುದಾಯಗಳ ವಿರುದ್ಧವೂ ಆರೋಪಗಳನ್ನ ಮಾಡಿ ಸುದ್ದಿಯಾಗಿದ್ದಾರೆ. ರಂಗೋಲಿ ಮತ್ತು ಕಂಗನಾ ಹೆಚ್ಚು ಪ್ರಭಾವಶಾಲಿ, ಶಕ್ತಿಶಾಲಿ, ವಿಶ್ವದಾದ್ಯಂತ ಲಕ್ಷಾಂತರ ಅನುಯಾಯಿಗಳು ಹೊಂದಿದ್ದಾರೆ. ಉನ್ನತ ಮಟ್ಟದ ರಾಜಕೀಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ” ಎಂದು ವಕೀಲರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಮತ್ತು ರಂಗೋಲಿ ಇಬ್ಬರು ಸಮುದಾಯಗಳ ನಡುವೆ ಸಾಮರಸ್ಯ ಕದಡುವಂತಹ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಬಾಂದ್ರಾ ಕೋರ್ಟ್ ಕಂಗನಾ ಮತ್ತು ಸಹೋದರಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿದೆ. ಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಸಮನ್ಸ್ ಸಹ ನೀಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟ ಚಂದು ಗೌಡ
ದರ್ಶನ್ ರೋಡ್ ಶೋನಲ್ಲಿ ನಟಿ ಅಮೂಲ್ಯ ಭಾಗಿ
ಮತಕ್ಕಾಗಿ `ಗಜ’ ಸಂಚಾರ : ಸಾಮಾಜಿಕ ಅಂತರ ಎಲ್ಲಿ ‘ಸ್ವಾಮಿ’..?
ಮೊಮ್ಮಗನನ್ನ ಪ್ರೀತಿಯಿಂದ ಈ ಹೆಸರಿನಿಂದ ಕರೆಯುತ್ತಾರಂತೆ ಸುಂದರ್ ರಾಜ್..!
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಮತ್ತು ರಂಗೋಲಿ ಇಬ್ಬರು ಸಮುದಾಯಗಳ ನಡುವೆ ಸಾಮರಸ್ಯ ಕದಡುವಂತಹ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಬಾಂದ್ರಾ ಕೋರ್ಟ್ ಕಂಗನಾ ಮತ್ತು ಸಹೋದರಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿದೆ. ಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಸಮನ್ಸ್ ಸಹ ನೀಡಿದ್ದಾರೆ.
kangana ranouth
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel