ನೋ ಪಟಾಕಿ ಎಂದವರಿಗೆ 3 ದಿನ ಕಾರ್ ಬಳಸದೇ ನಡೆದುಕೊಂಡು ಹೋಗಿ ಎಂದ ಕಂಗನಾ..!
ಮುಂಬೈ: ಒಂದೆಡೆ ದೀಪಾವಳಿ ಸಂಭ್ರಮ ಮತ್ತೊಂದೆಡೆ ಕೊರೊನಾ ಆತಂಕ ಜೊತೆಗೆ ವಾಯು ಮಾಲಿನ್ಯದ ಪರಿಸ್ಥಿತಿ.. ಹೀಗಿರುವಾಗ ಅನೇಕರು ಪಟಾಕಿ ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈ ನಡುವೆ ಬಾಲಿವುಡ್ ನ ಕ್ವೀನ್ ಕಂಗನಾ ರಣಾವತ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಪಟಾಕಿ ಬ್ಯಾನ್ ಮಾಡಿ ಎಂದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ 3 ದಿನ ಕಾರ್ ಬಳಸದೇ ನಡೆದುಕೊಂಡು ಹೋಗಿ ಎಂದು ಸವಾಲ್ ಹಾಕಿದ್ದಾರೆ.
ಸದ್ಗುರು ಪಟಾಕಿ ಬಗ್ಗೆ ಹೇಳಿರುವ ವಿಡಿಯೋವೊಂದನ್ನು ಹಂಚಿಕೊಂಡು, ಕಂಗನಾ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೀಪಾವಳಿ ಹೋರಾಟಗಾರರಿಗೆ ಇದು ಸರಿಯಾದ ಉತ್ತರ. ಅಂತಹವರು ಮೂರು ದಿನ ಆಫೀಸ್ಗೆ ಕಾರ್ ತೆಗೆದುಕೊಂಡು ಹೋಗಬೇಡಿ. ಮಿಲಿಯನ್ಗಟ್ಟಲೇ ಮರಗಳನ್ನು ವಿಶ್ವದಾದ್ಯಂತ ನೆಟ್ಟಿ ರೆಕಾರ್ಡ್ ಮಾಡಿದವರು ಈ ಮನುಷ್ಯ ಎಂದು ಕಂಗನಾ ರಣಾವತ್ ಅವರು ಇನ್ಸ್ಟಾಗ್ರಾಮ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನವೆಂಬರ್ 16ಕ್ಕೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಪ್ಪುಗೆ ನುಡಿ ನಮನ – ಒಟ್ಟಾಗಲಿದೆ ಇಡೀ ಚಿತ್ರರಂಗ
ಚಿಕ್ಕವರಿದ್ದಾಗ ಸೆಪ್ಟೆಂಬರ್ ತಿಂಗಳು ಶುರುವಾಗುತ್ತಿದ್ದಂತೆ ಪಟಾಕಿ ಹೊಡೆಯುವ ಕನಸ್ಸು ಕಾಣುತ್ತಿದ್ದೆವು. ಕೆಲ ವರ್ಷಗಳಿಂದ ನಾನು ಪಟಾಕಿ ಹಚ್ಚಿಲ್ಲ. ದೀಪಾವಳಿ ಬರುವ ತನಕವೂ ಪಟಾಕಿ ಹೊಡೆಯುತ್ತಿದ್ದೆವು. ಆಮೇಲೆ ಒಂದು ತಿಂಗಳ ಬಳಿಕವೂ ಪಟಾಕಿ ಹೊಡೆಯುತ್ತಿದ್ದೆವು. ಕೆಲವರು ಪರಿಸರದ ಬಗ್ಗೆ ಇದ್ದಕ್ಕಿದ್ದಂತೆ ಕಾಳಜಿ ಮಾಡಿ ಮಕ್ಕಳು ಪಟಾಕಿ ಹೊಡೆಯಬಾರದು ಅಂತ ಹೇಳುತ್ತಿದ್ದಾರೆ, ಅದು ಸರಿಯಲ್ಲ. ಗಾಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿರುವವರು 3 ದಿನ ಆಫೀಸ್ಗೆ ಕಾರ್ ಓಡಿಸಬೇಡಿ, ಮಕ್ಕಳಿಗೆ ಪಟಾಕಿ ಹೊಡೆಯಲು ಬಿಡಿ. ಈ ತ್ಯಾಗ ಮಾಡುವುದರಿಂದ ಮಕ್ಕಳು ಪಟಾಕಿ ಹೊಡೆದು ಎಂಜಾಯ್ ಮಾಡಬಹುದು ಎಂದು ಸದ್ಗುರು ಹೇಳಿದ್ದರು. ಇದಕ್ಕೆ ಕಂಗನಾ ಸಹಮತಿ ಸೂಚೊಸಿದ್ದಾರೆ.
ಅಂದ್ಹಾಗೆ ಇತ್ತೀಚೆಗೆ ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಅವರು ಪಟಾಕಿ ಹೊಡೆಯೋದು ಬಹಳ ಹಳೆಯ ಸಂಪ್ರದಾಯ, ಜವಾಬ್ದಾರಿಯುತವಲ್ಲದ ದೀಪಾವಳಿ ಹಬ್ಬದ ಸಂಪ್ರದಾಯ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದಾದ ನಂತರದಲ್ಲಿ ಕಂಗನಾ ಈ ಪೋಸ್ಟ್ ಹಾಕಿ ಪೊರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.