Hijab Controvercy : ಧೈರ್ಯ ಇದ್ದರೆ ಹೋಗಿ ಬುರ್ಖಾ ಧರಿಸಿದೇ ಅಫ್ಗಾನಿಸ್ತಾನದಲ್ಲಿ ಓಡಾಡಿ : ಕಂಗನಾ
ಮುಂಬೈ : ಕರ್ನಾಟಕದಲ್ಲಿನ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಈಗ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ.. ಈ ವಿಚಾರವಾಗಿ ಇದೀಗ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ.. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕಂಗನಾ , ನಿಮಗೆ ಧೈರ್ಯ ತೋರಿಸಬೇಕು ಎನಿಸಿದರೆ, ಹೋಗಿ ಅಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೇ ಧೈರ್ಯ ಪ್ರದರ್ಶಿಸಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ನೀವು ಸ್ವತಂತ್ರರಾಗುವತ್ತ ಯೋಚಿಸಿ, ನಿಮ್ಮನ್ನು ನೀವು ಬಂಧಿಸಿಕೊಳ್ಳಲು ಯತ್ನಿಸಬೇಡಿ ಎಂದು ಕಂಗನಾ ಕರೆ ನೀಡಿದ್ಧಾರೆ..
Mahesh Babu-Vijay | ಪ್ರಿನ್ಸ್ ವರ್ಸಸ್ ದಳಪತಿ.. ಟ್ವಿಟ್ಟರ್ ನಲ್ಲಿ ಫ್ಯಾನ್ಸ್ ವಾರ್
ಕಂಗನಾ ರನೌತ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಲೇಖಕ ಆನಂದ್ ರಂಗನಾಥನ್ ಅವರ ಟ್ವಿಟರ್ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.. ಆನಂದ್ ರಂಗನಾಥ್ ಅವರು ಹಿಜಬ್ ಸಂಘರ್ಷದ ಬೆಳವಣಿಗೆಯ ಬಗ್ಗೆ ಸರಣಿ ಟ್ವೀಟ್ ಗಳನ್ನ ಮಾಡತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅವರು ಈ ಪದ್ಧತಿಯನ್ನು ಕಠೋರ, ಸ್ತ್ರೀದ್ವೇಷ ಮತ್ತು ದಬ್ಬಾಳಿಕೆ ಎಂದು ಅಭಿಪ್ರಾಯ ಹೊರಹಾಕಿದ್ದರು..