ಸೂಪರ್ ಸ್ಟಾರ್ ಗೆ ನೆಲ್ಸನ್ ಆಕ್ಷನ್ ಕಟ್ – ರಜನಿ ಮಾಸ್ ಲುಕ್ ಗೆ ಫ್ಯಾನ್ಸ್ ಫಿಧಾ….
ರಜನಿಕಾಂತ್ ಮುಂದಿನ ಚಿತ್ರ ಯಾರು ನಿರ್ದೇಶಿಸುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದೆ… ಸೂಪರ್ ಸ್ಟಾರ್ ರಜಿನಿಕಾಂತ್ ಗೆ ಆಕ್ಷನ್ ಕಟ್ ಹೇಳುವ ಅವಕಾಶವನ್ನ ನೆಲ್ಸನ್ ದಿಲೀಪ್ ಕುಮಾರ್ ಗಿಟ್ಟಿಸಿಕೊಂಡಿದ್ದಾರೆ.. ಸೂಪರ್ ಸ್ಟಾರ್ ನಿರ್ದೇಶನ ಮಾಡಬೇಕು ಎನ್ನುವುದು ಹಲವು ನಿರ್ದೇಶಕರ ಕನಸು.. ಅದರಲ್ಲೂ ಯುವ ನಿರ್ದೇಶಕರಿಗೆ ಅದು ಫ್ಯಾನ್ ಬಾಯ್ ಮೂಮೆಂಟ್. ಇಂಥಹ ಅಧ್ಬುತ ಅವಕಾಶ ವಿಜಯ್ ಮುಂಬರುವ ಚಿತ್ರ ಬೀಸ್ಟ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೆ ಸಿಕ್ಕಿದೆ.
ದಕ್ಚಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ತಮ್ಮ 169 ಚಿತ್ರವನ್ನ ನಿರ್ದೇಶಿಸಲು ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೆ ಅವಕಾಶ ನೀಡಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಸನ್ ಪಿಚ್ಚರ್ಸ್ ಚಿತ್ರದ ಚಿಕ್ಕ ವೀಡಿಯೋ ತುಣುಕು ಹಂಚಿಕೊಂಡಿದೆ…
ಮೊದಲಿಗೆ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಅವರನ್ನ ತೋರಿಸಿದರೆ ನಂತರ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಇಂಟ್ರಡಕ್ಷನ್ ಮಾಡಿದ್ದಾರೆ.. ನಂತರ ಕೊನೆಯಲ್ಲಿ ಸಖತ್ ಸ್ಟೈಲಿಶ್ ಸೂಪರ್ ಸ್ಟಾರ್ ಗೆ ನೆಲ್ಸನ್ ಆಕ್ಷನ್ ಕಟ್ – ರಜನಿ ಮಾಸ್ ಲುಕ್ ಗೆ ಫ್ಯಾನ್ಸ್ ಫಿಧಾ…. ಅಂಡ್ ಮಾಸ್ ಇಮೇಜ್ ನಲ್ಲಿ ರಜನಿಕಾಂತ್ ಇಂಟ್ರಡಕ್ಷನ್ ಭರ್ಜರಿಯಾಗಿ ಹೊರಬಂದಿದೆ.
ಈ ಸಿನಿಮಾ ಚಿತ್ರೀಕರಣ ಏಪ್ರಿಲ್ ಅಥವಾ ಮೇ ನಲ್ಲಿ ಆರಂಭವಾಗಲಿದೆ. ಅಲ್ಲದೇ ಈ ವೇಗವಾಗಿ ಚಿತ್ರೀಕರಣ ಮುಗಿಸಿ ಸಿನಿಮಾವನ್ನ ಸಂಕ್ರಾಂತಿ ವೇಳೆಗೆ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.
ರಜನಿ ಅಭಿನಯದ ಅಣ್ಣಾತೆ ಚಿತ್ರ ವರ್ಷ ರಿಲೀಸ್ ಆಗಿತ್ತು. ಪ್ಯಾಮಿಲಿ ಆಡಿಯೆನ್ಸ್ ಗಳನ್ನ ರಂಜಿಸಿತ್ತು. ಇನ್ನೂ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಬೀಸ್ಟ್ ಚಿತ್ರದ ರಿಲೀಸ್ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ವಿಜಯ್ ಅಭಿನಯದ ಈ ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.