ಅಶ್ಲೀಲ ವಿಡಿಯೋ ಕೇಸ್ : “ಹೊಳೆಯೋದೆಲ್ಲಾ ಚಿನ್ನವಲ್ಲ” – ಕುಂದ್ರಾ ವಿರುದ್ಧ ಕಂಗನಾ ವ್ಯಂಗ್ಯ..!
ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳನ್ನು ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಅಲ್ಲದೇ ರಾಜ್ ಕುಂದ್ರಾ ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗ್ತಿದೆ.. ಈ ನಡುವೆ ರಾಜ್ ಕುಂದ್ರಾ ಅವರು ಈ ಹಿಂದೆ ಮಾಡಿದ್ದ ಟ್ವೀಟ್ ಈಗ ಭಾರೀ ವೈರಲ್ ಆಗ್ತಿದೆ.
ಇದೀಗ ಎಲ್ಲಾ ವಿಚಾರಗಳಲ್ಲೂ ಸುಖಾ ಸುಮ್ಮನೇ ಮೂಗಿ ತೂರಿಸೋ ಕಂಗನಾ ಈ ವಿಚಾರದ ಬಗ್ಗೆಯೇ ಮಾತನಾಡ್ಲೇ ಬೇಕು ಅನ್ನೋ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯವಾಡಿದ್ದಾರೆ. ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ಜೈಲು ಸೇರಿರುವ ರಾಜ್ ಕುಂದ್ರ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, ಸಿನಿಮಾರಂಗವನ್ನು ‘ಮೋರಿ’ ಅಥವ ಚರಂಡಿ ಎಂದು ಹೇಳಿದ್ದಾರೆ. ಅಲ್ಲದೇ ಹೊಳೆಯುವುದೆಲ್ಲ ಚಿನ್ನವಲ್ಲ ಎಂದು ವ್ಯಂಗ್ಯವಾಗಿದ್ದಾರೆ. ಇದೇ ಕಾರಣಕ್ಕೆ ನಾನು ಚಿತ್ರರಂಗವನ್ನು ಗಟ್ಟರ್ ( ಮೋರಿ) ಎಂದು ಕರೆದಿದ್ದೆ ಎಂದಿದ್ದಾರೆ.. ಇಲ್ಲಿ ಹೊಳೆಯುವುದೆಲ್ಲಾ ಚಿನ್ನವಲ್ಲ ಎಂದಿದ್ದಾರೆ.
ಅಶ್ಲೀಲ ಸಿನಿಮಾಗಳ ನಿರ್ಮಾಣ – ಅಶ್ಲೀಲ ವಿಡಿಯೋಗಳ ಕುರಿತಾಗಿ ರಾಜ್ ಕುಂದ್ರಾ ಮಾಡಿದ್ದ ಹಳೆ ಟ್ವೀಟ್ ವೈರಲ್
ಅಷ್ಟೆಯಲ್ಲ ಇದೇ ವೇಳೆ ಮುಂದಿನ ತನ್ನ ನಿರ್ಮಾಣದ ಸಿನಿಮಾದಲ್ಲಿ ಬಾಲಿವುಡ್ ಬಗ್ಗೆ ಬಹಿರಂಗ ಪಡಿಸುವೆ ಎಂದು ಕಂಗನಾ ಹೇಳಿದ್ದಾರೆ. ನನ್ನ ನಿರ್ಮಾಣದಲ್ಲಿ ಬರ್ತಿರುವ ಟಿಕು ವೆಡ್ಸ ಶೆರು ಸಿನಿಮಾದಲ್ಲಿ ಬಾಲಿವುಡ್ ಬಗ್ಗೆ ಬಹಿರಂಗ ಪಡಿಸುವೆ. ಇಂತ ಸೃಜನಶೀಲ ಉದ್ಯಮದಲ್ಲಿ ನಮಗೆ ಬಲವಾದ ಮೌಲ್ಯ ವ್ಯವಸ್ಥೆ ಮತ್ತು ಆತ್ಮಸಾಕ್ಷಿಯ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ.
ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ರಾತ್ರಿ ಬಂಧಿಸಿದ್ದರು. ಇದೀಗ ಜುಲೈ 23ರ ವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ರಾಜ್ ಕುಂದ್ರ ಬಂಧನದ ಬಳಿಕ ಸಾಕಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಈ ನಡುವೆ ರಾಜ್ ಕುಂದ್ರಾ ಅವರು ಈ ಹಿಂದೆ ಮಾಡಿದ್ದ ಟ್ವೀಟ್ ಈಗ ಭಾರೀ ವೈರಲ್ ಆಗ್ತಿದೆ.
“ಜೆಂಟಲ್ ಮೆನ್” ಆಗಿ ಹಿರಿತೆರೆಯಿಂದ ಕಿರುತೆರೆಗೆ ಬರುತ್ತಿದ್ದಾರೆ ಡೈನಾಮಿಕ್ ಪ್ರಿನ್ಸ್..!
ನೀಲಿ ಚಿತ್ರದ ಬಗ್ಗೆ ರಾಜ್ ಕುಂದ್ರಾ ಅವರು 2012ರಲ್ಲಿ ಮಾಡಿದ್ದ ಸುಮಾರು 8 – 9 ವರ್ಷಗಳ ಹಳೆಯ ಟ್ವೀಟ್ ಗಳು ಈಗ ವೈರಲ್ ಆಗುತ್ತಿವೆ. ವೇಶ್ಯಾವಾಟಿಕೆ ಮತ್ತು ಟ್ವೀಟ್ ನಲ್ಲಿ ‘ಕ್ಯಾಮೆರಾದಲ್ಲಿ ಸೆರೆಯಾದ ಸೆಕ್ಸ್ ನೋಡಲು ಹಣ ತೆರುವುದು ಕಾನೂನುಬದ್ಧ ಆಗಿರುವಾಗ ವೇಶ್ಯಾವಾಟಿಕೆ ಏಕೆ ಕಾನೂನು ಬಾಹಿರ’ ಎಂದು ರಾಜ್ ಕುಂದ್ರಾ ಪ್ರಶ್ನೆ ಮಾಡಿದ್ದರು. ಆ ಮೂಲಕ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅದೇ ವರ್ಷ ಮಾಡಿದ್ದ ಮತ್ತೊಂದು ಟ್ವೀಟ್ ನಲ್ಲಿ ನಟರು ಕ್ರಿಕೆಟ್ ಆಡುತ್ತಿದ್ದಾರೆ. ಕ್ರಿಕೆಟಿಗರು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣಿಗಳು ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ. ಪೋರ್ನ್ ಸ್ಟಾರ್ ಗಳು ನಟರಾಗುತ್ತಿದ್ದಾರೆ ಎಂದಿದ್ದರು. ಇದೀಗ ರಾಜ್ ಬಂಧನದ ಬೆನ್ನಲ್ಲೇ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಇನ್ನೂ ಈ ಪ್ರಕರಣದ ಬಗ್ಗೆ ಹಲವು ತಿಂಗಳುಗಳಿಂದ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು.. ಮಾಹಿತಿಗಳನ್ನೆಲ್ಲಾ ಕಲೆ ಹಾಕಿದ ನಂತರ ಈ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂಬುದು ಗೊತ್ತಾಗಿದೆ..
ಅಶ್ಲೀಲ ವಿಡಿಯೋ ಕೇಸ್ – ಪತಿಯ ಕಾನೂನು ಬಾಹಿರ ಚಟುವಟಿಗಳಲ್ಲಿ ಶಿಲ್ಪಾ ಶೆಟ್ಟಿ ಪಾಲಿದ್ಯಾ..?
ವರ್ಷದ ಫೆಬ್ರವರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು, ತನಿಖೆ ವೇಳೆ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ತಿಳಿದುಬಂದಿದ್ದು ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳನ್ನು ಒಟ್ಟುಗೂಡಿಸಿಕೊಂಡ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಉದ್ಯಮಿ ಆಗಿದ್ದು, ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್‌ನ ಮಾಲೀಕರು ಸಹ ಆಗಿದ್ದಾರೆ.
ಈ ನಡುವೆ ಮಾಡೆಲ್ ಗೆಹ್ಲೋಟ್ ರಾಜ್ ಕುಂದ್ರಾ ಬೆಂಬಲಕ್ಕೆ ಬಂದಿದ್ದು, ರಾಜ್ ಕುಂದ್ರ ತಪ್ಪು ಮಾಡಿಲ್ಲ.. ಪಾರ್ನ್ ವಿಡಿಯೋಸ್ ಶುಟ್ ಮಾಡಿಸಿಲ್ಲ. ಇವು ಬೋಲ್ಡ್ ವಿಡಿಯೋಸ್. ಎರಿಯೋಟಿಕ್ ವಿಡಿಯೋಗಳನ್ನ ಪಾರ್ನ್ ವಿಡಿಯೋಗಳ ಜೊತೆಗೆ ಸೇರಿಸಬೇಡಿ ಎಂದಿದ್ದಾರೆ. ಅಲ್ಲದೇ ರಾಜ್ ಕುಂದ್ರ ಬಗ್ಗೆ ಅಡಲ್ಟ್ ಸ್ಟಾರ್ ಪೂನಂ ಪಾಂಡೆ ಸೆಕ್ಸ್ ರಾಕೆಟ್ ನ ಮಾಸ್ಟರ್ ಮೈಂಡ್ ಎಂದು ಆರೋಪಿಸಿದ್ದಾರೆ ಎಂದು ರಾಷ್ಟ್ರೀಯ ವೆಬ್ ಪೋರ್ಟಲ್ ಗಳಲ್ಲಿ ವರದಿಯಾಗಿದೆ. ಕಳೆದ ವರ್ಷದಿಂದ ಅಶ್ಲೀಲ ಚಿತ್ರೀಕರಣ ದಂಧೆಯ ಹಿಂದೆ ಬಿದ್ದಿದ್ದ ಪೊಲೀಸರು ದೊಡ್ಡ ಜಾಲವನ್ನು ಪತ್ತೆ ಮಾಡಿ 9 ಜನರನ್ನು ಬಂಧಿಸಿದ್ದಾರೆ. ಅಲ್ಲದೇ ಇನ್ನೂ ಅನೇಕರ ಹೆಸರುಗಳು ಕೇಳಿ ಬರ್ತಿವೆ ಎನ್ನಲಾಗಿದೆ..








