ಮೆಗಾ ಸ್ಟಾರ್ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ..! ಯಾರ್ ಗೊತ್ತಾ..!
ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದೀಗ ಈ ಚಿತ್ರದಲ್ಲಿ ತಮ್ಮ ಕನ್ನಡ ಖ್ಯಾತ ನಟರೊಬ್ಬರು ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದ್ದು, ಕನ್ನಡಾಭಿಮಾನಿಗಳು ಖುಷ್ ಆಗಿದ್ದಾರೆ. ಹೌದು.. ಆಚಾರ್ಯ ಸಿನಿಮಾದಲ್ಲಿ ಭಜರಂಗಿ ಲೋಕಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಸೌರವ್ ಲೋಕೇಶ್ ಆಚಾರ್ಯದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ. ಆದರೆ ಲೋಕಿ ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿ ತನ್ನ ಭಾಗದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಚಿರಂಜೀವಿ ನಟನೆಯ 152ನೇ ಸಿನಿಮಾ ಆಚಾರ್ಯ ರಾಮ್ ಚರಣ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಚಿತ್ರದದಲ್ಲಿ ನಾಯಕಿಯಾಗಿ ಕಾಜಲ್ ಅಗರ್ ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಮೂಲಕ ಲೋಕಿ ತಮ್ಮ ನಟನೆಯಿಂದ ಅಭಿಮಾನಿಗಳನ್ನ ಮೋಡಿಗೊಳಿಸಿದ್ರು. ಖಳನಾಯಕನಾಗಿ ಲೋಕಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ರು. ಇದಾದ ಬಳಿಕ ಸೌರವ್ ಲೋಕಿ ಭಜರಂಗಿ ಲೋಕಿ ಆಗಿಯೇ ಫೇಮಸ್ ಆದ್ರೂ.
ಇದಾದ ಬಳಿಕ ಹೆಚ್ಚಾಗಿ ಖಳನಾಯಕನಾಗಿಯೇ ಮಿಂಚಿ ಪ್ರಖ್ಯಾತಿ ಪಡೆದ ಲೋಕಿ ರಥಾವರದಲ್ಲಿ ಮಹಾದೇವಿಯಾಗಿ ಕಾಣಿಸಿಕೊಂಡು ಸಿನಿಮಾದ ಹೈಲೆಟ್ ಎನಿಸಿಕೊಂಡಿದ್ರು. ಯಾರು ನೋಡಿದ್ರೂ ಲೋಕಿ ಅಭಿನಯವನ್ನ ಕೊಂಡಾಡುವಂತಾಗಿತ್ತು.
ಇದೀಗ ಲೋಕಿ ಆಚಾರ್ಯ ಮೂಲಕ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಬಾರಿಗೆ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನೂ ಲೋಕಿ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾದಲ್ಲೂ ನಟಿಸಿದ್ದು, ಮೇಗೆ ಚಿತ್ರ ರಿಲೀಸ್ ಆಗಲಿದೆ.
ಮೂರು ಭಾಷೆ.. ಸಾವಿರ ಬೆಳ್ಳಿ ಪರದೆ ಮೇಲೆ ಪೊಗರು ತೋರಿಸಲಿದ್ದಾರೆ ಧೃವ ಸರ್ಜಾ
ಸಿನಿಪ್ರಿಯರಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ : ಸ್ಟಾರ್ ಸಿನಿಮಾಗಳ ರಿಲೀಸ್ ಗೆ ಡೇಟ್ ಫಿಕ್ಸ್ ..! ಡೀಟೇಲ್ಸ್..!
140 ದಿನಗಳ ಸೆರೆವಾಸದ ಬಳಿಕ ‘ತುಪ್ಪದ ಬೆಡಗಿ’ಗೆ ಸಿಕ್ತು ಬೇಲ್ ಭಾಗ್ಯ..!
‘ರಿಯಲ್ ಹೀರೋ’ ಸೋನು ಸೂದ್ ಗೆ ಹೈಕೋರ್ಟ್ ನಲ್ಲಿ ಹಿನ್ನೆಡೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel