ಕಿಚ್ಚನ ಅನುಪಸ್ಥಿತಿಯಲ್ಲಿ ಈ ವಾರ ಬಿಗ್ ಬಾಸ್ ಹೇಗಿತ್ತು..?
ಬೆಂಗಳೂರು : ಸಣ್ಣ ಆರೋಗ್ಯ ಸಮಸ್ಯೆಯಿಮದ ಈ ವಾರ ಬಿಗ್ ಬಿಗ್ ಬಾಸ್ ನಿರೂಪಣೆಯಿಂದ ಕಿಚ್ಚ ಹಿಂದೆ ಸರಿದಿದ್ದರು. ಅವರು ಟ್ವೀಟ್ ಮೂಲಕ ಈ ವಿಚಾರ ಸ್ಪಷ್ಟಪಡಿಸುತ್ತಿದ್ದಂತೆ, ಕಿಚ್ಚ ಸುದೀಪ್ ಇಲ್ಲದ ಬಿಗ್ ಬಾಸ್ ಹೇಗಿರುತ್ತೆ. ಅವರಿಲ್ಲದೆ ಶೋ ಹೇಗಿರಬಹುದು.. ಅವರ ಬದಲಿಗೆ ಈ ವಾರ ಯಾರು ನಿರೂಪಣೆ ಮಾಡಬಹುದು. ಬಿಗ್ ಬಾಸ್ ಏನ್ ಪ್ಲಾನ್ ಮಾಡಿದೆ. ಈ ಕ್ಯೂರಿಯಾಸಿಟಿ ತುಂಬಾ ಜನರನ್ನ ಕಾಡಿತ್ತು. ಖುದ್ದು ಕಿಚ್ಚ ಸುದೀಪ್ ಅವರಿಗೆ ಇದರ ಕಾತರತೆ ಇತ್ತು..
ಹಾಗೆ ಸುಈಪ್ ಬದಲಿಗೆ ಈ ವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿರೂಪಣೆ ಮಾಡಬಹುದು. ಸ್ಪರ್ಧಿಗಳ ಕಾಳೆಯುವುದು, ಅವರಿಗೆ ಕ್ಲಾಸ್ ತೆಗೆದುಕೊಳ್ಳೋದು ಮಾಡಬಹುದು ಹೀಗೆಲ್ಲಾ ಗಾಸಿಪ್ ಗಳು ಕೂಡ ಹರಿದಾಡಿದ್ದವು. ಆದ್ರೆ ಅಸಲಿಗೆ ಹೀಗೆ ಏನೂ ಸಹ ಆಗಲಿಲ್ಲ.
ಬದಲಾಗಿ ಕಿಚ್ಚನ ಬದಲಿಗೆ ಸ್ಟೇಜ್ ಮೇಲೆ ಯಾರೂ ಬರಲೇ ಇಲ್ಲ. ವಾರದ ಕಥೆ , ಪಂಚಾಯತಿ ನಡೆಯಲೇ ಇಲ್ಲ. ಬದಲಾಗಿ ಬಿಗ್ ಬಾಸ್ ಸ್ಫರ್ಧಿಗಳಿಗೆ ವಿಸೇಷ ಟಾಸ್ಕ್ ನೀಡಿದ್ರು. ಈ ಟಾಸ್ಕ್ ನೇರಾ ನೇರಾ ಮುಂದಿನ ವಾರ ನಾಮಿನೇಷನ್ ರೌಂಡ್ ನಿಂದ ಬಚಾವ್ ಆಗುವ ಗೋಲ್ಡ್ ಅವಕಾಶದ ಟಾಸ್ಕ್ ಆಗಿತ್ತು.
‘ಗೋಲ್ಡನ್ ಪಾಸ್’ ಪಡೆಯಲು ಸ್ಪರ್ಧಿಗಳಿಗಾಗಿ ‘ಬಿಗ್ ಬಾಸ್’ ವಿಶೇಷ ಚಟುವಟಿಕೆ ನೀಡಿದ್ದರು. ಅದರ ಅನುಸಾರ ಬೇರೆ ಸ್ಪರ್ಧಿಗಳ ಫೋಟೋ ಇರುವ ಲಗೇಜ್ ಹಿಡಿದು ಸ್ಪರ್ಧಿಗಳು ಬಸ್ ಹತ್ತಬೇಕಿತ್ತು. ಕೊನೆಯಲ್ಲಿ ಉಳಿಯುವ ಲಗೇಜ್ ಮೇಲಿರುವ ಸ್ಪರ್ಧಿಯ ಫೋಟೋ ಅನುಸಾರ ಔಟ್ ಆಗಬೇಕಿತ್ತು. ಈ ಚಟುವಟಿಕೆಯ ಅಂತ್ಯದಲ್ಲಿ ಶುಭಾ ಪೂಂಜಾ ಕೃಪೆಯಿಂದ ರಾಜೀವ್ ‘ಗೋಲ್ಡನ್ ಪಾಸ್’ ಪಡೆದರು. ‘ಗೋಲ್ಡನ್ ಪಾಸ್’ ಸಿಕ್ಕಿರುವುದರಿಂದ ನಾಮಿನೇಷನ್ನಿಂದ ಒಂದು ಬಾರಿ ಬಚಾವ್ ಆಗುವ ಅವಕಾಶ ರಾಜೀವ್ಗೆ ಸಿಕ್ಕಿದೆ.