ಕನ್ನಡ ಸಿನಿಮಾ ನಿರ್ಮಾಪಕ , ವಿತರಕ ದೀಪಕ್ ಸಾಮಿದೊರೈ ನಿಧನ
ಕನ್ನಡದ ‘ಗಿಮಿಕ್’ ಸಿನಿಮಾ ಖ್ಯಾತಿಯ ನಿರ್ಮಾಪಕ ಹಾಗೂ ಕನ್ನಡ ಸಿನಿಮಾಗಳ ವಿತರಕ ದೀಪಕ್ ಸಾಮಿದೊರೈ ನಿಧನರಾಗಿದ್ದಾರೆ. ಅವರ ಸಾವಿಗೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದು, ಆನಂದ್ ಆಡಿಯೋ ಸಂಸ್ಥೆ ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿದೆ.
ದೀಪಕ್ ಅವರು ಸಾಮಿ ಪಿಕ್ಚರ್ಸ್ ಮತ್ತು ಸೌತ್ಸೈಡ್ ಸ್ಟುಡಿಯೋಗಳಲ್ಲಿ ನಿರ್ಮಾಪಕ ಹಾಗೂ ವಿತರಕರಾಗಿ ಕೆಲಸ ಮಾಡುತ್ತಿದ್ದರು. ನಾಗಣ್ಣ ನಿರ್ದೇಶನ ಮಾಡಿದ್ದ ‘ಗಿಮಿಕ್’ ಸಿನಿಮಾಗೆ ಇವರು ಬಂಡವಾಳ ಹೂಡಿದ್ದರು. ಗೋಲ್ಡನ್ ಸ್ಟಾರ್ ನಟನೆಯ ಕಾಮಿಡಿ ಕಮ್ ಹಾರರ್ ಸಿನಿಮಾವಾಗಿದ್ದ ಗಿಮಿಕ್ 2019ರಲ್ಲಿ ಬಿಡುಗಡೆಯಾಗಿತ್ತು.
ಇನ್ನೂ ಕಳೆದ ಕೆಲ ದಿನಗಳಿಂದ ಕೋವಿಡ್ ಹಾಗೂ ಇತರೇ ಕಾಯಿಗಳಿಂದಾಗಿ ಕನ್ನಡ ಸಿನಿಮಾರಂಗದ ಅನೇಕ ಕಲಾವಿದರು ವಿಧಿವಶರಾಗಿದ್ದಾರೆ. ಹಿರಿಯ ರಂಗಭೂಮಿ ಕಲಾವಿದ ಆರ್ಎಸ್ ರಾಜಾರಾಮ್, ಹಿರಿಯ ಚಿತ್ರ ಸಾಹಿತಿ ಶ್ರೀರಂಗ, ಖ್ಯಾತ ನಿರ್ಮಾಪಕ ರಾಮು ಸೇರಿದಂತೆ ಹಲವರು ಬಾರದ ಲೋಕಕ್ಕೆ ಪಯಣ ಬೆಳಸಿದ್ಧಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.