ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ನಡೆಯುತ್ತಿದ್ದ ಐದು ಟೆಸ್ಟ್ ಪಂದ್ಯಗಳ ವೇಳೆ ಗಾಯದಿಂದ ಕನ್ನಡಿಗ ಕೆಎಲ್ ರಾಹುಲ್ ತಂಡ ತೊರೆದಿದ್ದರು. ಸದ್ಯ ಅವರು ಐಪಿಎಲ್ ಗೆ ಫಿಟ್ ಎಂದು ಬಿಸಿಸಿಐ ಹಳಿದೆ.
ಎನ್ ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದ ರಾಹುಲ್, ಸಂಪೂರ್ಣ ಫಿಟ್ ಆಗಿದ್ದಾರೆ. ಐಪಿಎಲ್ ಅಖಾಡಕ್ಕೆ ದುಮುಕಲು ಸಿದ್ಧರಾಗಿದ್ದಾರೆ. ಅದಕ್ಕೆ ಪೂರಕವಾಗಿ ಎನ್ಸಿಎ ಕೂಡ ರಾಹುಲ್ ಫಿಟ್ ಎಂದು ಹೇಳಿದೆ.
ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಶಕ್ತಿ ಬಂದಂತಾಗಿದೆ. ಆದರೆ ಲೀಗ್ ನ ಆರಂಭದಲ್ಲೇ ಹೆಚ್ಚಿನ ಕೆಲಸದ ಹೊರೆ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಅಂದರೆ, ಅವರು ವಿಕೆಟ್ ಕೀಪಿಂಗ್ ಮಾಡದಂತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಲಹೆ ನೀಡಿದೆ. ಹೀಗಾಗಿ ರಾಹುಲ್ ಈ ಸೀಸನ್ನ ಆರಂಭಿಕ ಪಂದ್ಯಗಳಲ್ಲಿ ಕೇವಲ ಬ್ಯಾಟ್ಸ್ಮನ್ ಆಗಿ ಮಾತ್ರ ಆಡುತ್ತಾರೆ ಎನ್ನಲಾಗುತ್ತಿದೆ.
ರಾಹುಲ್ ಮಾರ್ಚ್ 20, ಗುರುವಾರ ಲಕ್ನೋದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಲಕ್ನೋ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 24ಕ್ಕೆ ರಾಜಸ್ಥಾನ್ ವಿರುದ್ಧ ಆಡಲಿದೆ.