Kantara : ಹಿಂದಿ ಅವತರಣಿಕೆಯಲ್ಲೂ ನೂರು ದಿನ ಪೂರೈಸಿದ ಕಾಂತಾರ…
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ’ ಸಿನಿಮಾ ಕನ್ನಡ ಮಾತ್ರವಲ್ಲದೇ ಹಿಂದಿ ಅವತರಣಿಕೆಯಲ್ಲೂ ಶತದಿನೋತ್ಸವನ್ನ ಪೂರೈಸಿದೆ. ಕನ್ನಡದ ಚಿತ್ರಬಿಡುಗಡೆಯಾದ 1 ವಾರದ ಬಳಿಕ ಹಿಂದಿ ಭಾಷೆಗೆ ಡಬ್ ಆಗಿ ಚಿತ್ರ ಬಿಡುಗಡೆಯಾಗಿತ್ತು.
ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಚಿತ್ರ ಆನಂತರ ತನ್ನ ಸಕ್ಸಸ್ ಮೂಲಕವೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆಯಿತು. ಈ ಬಗ್ಗೆ ರಿಷಬ್ ಮತ್ತು ʻಹೊಂಬಾಳೆʼ ಸಂಸ್ಥೆ ಸಂತಸ ಹಂಚಿಕೊಂಡಿದ್ದಾರೆ.
ಕಾಂತಾರ ನೂರು ದಿನ ಪೂರೈಸಿದ ಸಂಭ್ರಮದ ಕುರಿತು ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿ ಸಂಭ್ರಮಿಸಿದೆ. “ `ಕಾಂತಾರ’ 100 ದಿನಗಳನ್ನ ಪೂರೈಸಿದೆ ಎಂದು ಹೇಳಲು ನಾವು ಸಂಭ್ರಮಿಸುತ್ತೇವೆ. ಹಿಂದಿ ಚಿತ್ರರಂಗದ ಬೆಂಬಲಕ್ಕಾಗಿ ನಾವು ಪ್ರೇಕ್ಷಕರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇವೆ” ಎಂದಿದ್ದಾರೆ.
ಕಾಂತಾರ ಚಿತ್ರದ ಕ್ರೇಜ್ ಇಷ್ಟಕ್ಕೆ ನಿಂತಿಲ್ಲ. ಕಾಂತಾರ ಪಾರ್ಟ್ 2 ಕೂಡ ನಿರ್ಮಾಣವಾಗುತ್ತಿರುವುದಾಗಿ ನಿರ್ಮಾಪಕ ವಿಜಯ್ ಕಿರಂಗದೂರು ಅವರು ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿ ಈಗಾಗಲೇ ರಿಷಬ್ ಮತ್ತು ಟೀಮ್ ಕಥೆ ಮಾಡುವುದರಲ್ಲಿ ತೊಡಗಿದೆ ಎನ್ನುವ ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ಚಿತ್ರೀಕರಣದ ಸ್ಥಳ ಹುಡುಕಲು ಕಾಡು ಮೇಡು ಅಲೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.
Kantara : Kantara completes 100 days in Hindi version…








