Kantara movie song | ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ರಸದೌತಣ!
ಸ್ವಾತಂತ್ರ್ಯ ದಿನಾಚರಣೆಗೆ ರಿಷಬ್ ಸರ್ ಪ್ರೈಸ್
ಕಾಂತಾರ ಸಿನಿಮಾ ಮೊದಲ ಹಾಡು ಬಿಡುಗಡೆ
15ಕ್ಕೆ ವಾಮನ ಸಿನಿಮಾ ಫಸ್ಟ್ ಲುಕ್ ರಿಲೀಸ್
ಧನ್ವೀರ್ ಗೌಡ ಅಭಿನಯದ ಸಿನಿಮಾ ವಾಮನ
ಬೆಂಗಳೂರು : ಆಗಸ್ಟ್ 15 ಇಡೀ ಭಾರತ ಸ್ವತಂತ್ರ್ಯೋತ್ಸವದ ಸಂಭ್ರಮದಲ್ಲಿ ಇರಲಿದೆ.
ಇದೇ ದಿನ ಸಿನಿಮಾ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ.
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾದ ಮೊದಲ ಹಾಡು ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ.
ಸಿಂಗಾರ ಸಿರಿಯೆ – ಶಿವನೆದೆಯಲಿ ಲೀಲಾಳ ರಸಮಂಜರಿ ಎಂಬ ಮೊದಲ ವಿಡಿಯೋ ಹಾಡು ಆಗಸ್ಟ್ 15 ಮಧ್ಯಾಹ್ನ 12.58ಕ್ಕೆ ಬಿಡುಗಡೆಯಾಗಲಿದೆ.

ಪ್ರಮೋದ್ ಅವರು ಈ ಹಾಡನ್ನು ಬರೆದಿದ್ದು, ವಿಜಯ್ ಪ್ರಕಾಶ್, ಅನನ್ಯ ಭಟ್, ನಾಗರಾಜ್ ಪನರ್ ವಲ್ತೂರ್ ಹಾಡಿಗೆ ಧ್ವನಿಯಾಗಿದ್ದಾಎ. ಅಜನೀಶ್ ಲೋಕನಾಥ್ ಹಿನ್ನಡೆ ಸಂಗೀತ ನೀಡಿದ್ದಾರೆ.
ಮತ್ತೊಂದು ಕಡೆ ಧನ್ವೀರ್ ಗೌಡ ಅಭಿನಯದ ಸಿನಿಮಾ ವಾಮನ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.
ಈ ಸಿನಿಮಾಗೆ ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ.
ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಇದಾಗಿದೆ.
ಇದು ಮಾತ್ರವಲ್ಲದೇ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಮೇಜರ್ ಅಪ್ ಡೇಟ್ ಕೂಡ ಆಗಸ್ಟ್ 15 ಕ್ಕೆ ಸಿಗಲಿದೆ.