kantara | ಮೊದಲ ದಿನ ತೆಲುಗಿನಲ್ಲಿ ಕಾಂತಾರ ಗಳಿಕೆ ಎಷ್ಟು ?
ಕಾಂತಾರ..!! ಸದ್ಯ ಭಾರತೀಯ ಚಿತ್ರರಂಗದಲ್ಲಿ ಟಾಕ್ ಆಫ್ ದಿ ಟೌನ್ !!
ಈಗಾಗಲೇ ಭಾಷೆಗಳ ಗಡಿಗಳನ್ನು ದಾಟಿರುವ ಕಾಂತಾರ ಸಿನಿಮಾ, ರಿಲೀಸ್ ಆಗಿರುವ ಎಲ್ಲಾ ಕಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಸೆಪ್ಟೆಂಬರ್ 30 ರಂದು ಕರ್ನಾಟಕದಲ್ಲಿ ರಿಲೀಸ್ ಆದ ಕಾಂತಾರ ಸಿನಿಮಾ ಎಲ್ಲರ ಮೆಚ್ಚುಗೆ ಪಡೆದುಕೊಂಡು ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಕೂಡ ಡಬ್ ಆಗಿದೆ.
ಡಬ್ ಆಗಿ ರಿಲೀಸ್ ಆಗಿರುವ ಎಲ್ಲಾ ಭಾಷೆಗಳಲ್ಲಿ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ.
ಶನಿವಾರ ಅಂದ್ರೆ ಅಕ್ಟೋಬರ್ 15 ರಂದು ತೆಲುಗು ಭಾಷೆಯಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಯ್ತು.

ಫಸ್ಟ್ ಶೋನಿಂದಲೇ ಪಾಸಿಟಿವ್ ಟಾಕ್ ನೊಂದಿಗೆ ಕಾಂತಾರ ಮುನ್ನುಗ್ಗುತ್ತಿದೆ.
ಮೊದಲ ದಿನವೇ ಸಿನಿಮಾಗೆ ಪಾಸಿಟಿವ್ ಟಾಕ್ ಬಂದ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಿದೆ.
ಮೊದಲ ದಿನವೇ ಕಾಂತಾರ ಸಿನಿಮಾ ಐದು ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಕಾಂತಾರ ಸಿನಿಮಾಗೆ ತೆಲುಗಿನಲ್ಲಿ 2 ಕೋಟಿ ಥಿಯೇಟರ್ ಬಿಜಿನೆಸ್ ಆಗಿದೆಯಂತೆ.
ಹಾಗೇ ನೋಡಿದರೆ ಕಾಂತಾರ ಸಿನಿಮಾ ಮೊದಲ ಸಿನಿಮಾ ಲಾಭ ಗಳಿಸಿದೆ.
ಇನ್ನು ಪ್ರಪಂಚದಾದ್ಯಂತ ಕಾಂತಾರ ಸಿನಿಮಾ 114 ಕೋಟಿ ಶೇರ್ ಗಳಿಸಿದೆಯಂತೆ.