‘kantara’ ವೀಕ್ಷಣೆ ವೇಳೆ ವಾಸುಕಿ ವೈಭವ್ ಜೊತೆ ಕಿರಿಕ್ ಮಾಡಿಕೊಂಡ ಗುಂಪು..
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭರ್ಜರಿಯಾಗಿ ಓಡುತ್ತಿದೆ. ಸಿನಿಮಾ ನೋಡಲು ಪ್ರೇಕ್ಷರ ಜೊತೆಗೆ ಸಿನಿಮಾ ಮಂದಿ ಸಹ ಆಸಕ್ತಿ ತೋರಿಸುತ್ತಿದ್ದಾರೆ. ಕಾಂತಾರ ಸಿನಿಮಾ ವೀಕ್ಷಣೆಗೆ ಬಿಗ್ ಬಾಸ್ ಖ್ಯಾತಿಯ ಗಾಯಕ , ಸಂಗೀತ ನಿರ್ದೇಶಕ ವಾಸುಕಿ ವೈಭವ್ ಊರ್ವಶಿ ಥಿಯೇಟರ್ ಗೆ ತನ್ನ ಸ್ನೇಹಿತರೊಂದಿಗೆ ಹೋಗಿದ್ದರು.. ಈ ವೇಳೆ ಗುಂಪೊಂದು ವಾಸುಕಿ ವೈಭವ್ ಹಾಗೂ ಸ್ನೇಹಿತರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ..
ಅಕ್ಟೋಬರ್ 3 ರಂದು ಸಂಜೆ ಗಾಯಕ ವಾಸುಕಿ ವೈಭವ್ ತಮ್ಮ ಸ್ನೇಹಿತ ದರ್ಶನ್ ಗೌಡ ಹಾಗೂ ಸ್ನೇಹಿತೆ ಜೊತೆಗೆ ಸಿನಿಮಾ ವೀಕ್ಷಿಸಲು ಬೆಂಗಳೂರಿನ ಊರ್ವಶಿ ಥಿಯೇಟರ್ ಗೆ ಹೋಗಿದ್ದರು. ಅದೇ ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಬಂದಿದ್ದ ಗುಂಪೊಂದು ವಾಸುಕಿ ಕುಳಿತಿದ್ದ ಸೀಟ್ ಮುಂದೆ ಹೋಗುವಾಗ ಸಿನಿಮಾ ಬೇಗನೇ ಶುರುವಾಗಲಿದ್ದ ಕಾರಣಕ್ಕೆ ಬೇಗ ಕೂರುವಂತೆ ವಾಸುಕಿ ಸ್ನೇಹಿತ ದರ್ಶನ್ ಹೇಳಿದ್ದಾರೆ..
ಇಷ್ಟಕ್ಕೆ ಸಿಟ್ಟಾಗಿರುವ ಗುಂಪು ವಾಸುಕಿ , ಸ್ನೇಹಿತ ಹಾಗೂ ಸ್ನೇಹಿತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.. ಆ ಗುಂಪಿನಲ್ಲಿದ್ದ ಮುರುಳಿ, ಬಸವರಾಜ್ ಮತ್ತಿತರರು ವಾಸುಕಿ ಸ್ನೇಹಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಾಸುಕಿ ಹಾಗೂ ಗೆಳತಿಗೆ ಅಸಭ್ಯ ಪದ ಬಳಸಿ ನಿಂದಿಸಿದ್ದರಿಂದ ಗಲಾಟೆ ಶುರುವಾಗಿದೆ.
ಕೂಡಲೇ ವಾಸುಕಿ ವೈಭವ್ ಪೊಲೀಸರಿಗೆ ಕರೆ ಮಾಡಿದ್ದು , ಪೊಲೀಸರು ಎದುರಾಳಿ ಗುಂಪಿನಲ್ಲಿದ್ದ ಬಸವರಾಜ್, ಮುರುಳಿ ಮತ್ತಿತರರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಎನ್ ಸಿ ಆರ್ ದಾಖಲಿಸಿಕೊಂಡಿದ್ದಾರೆ.
ಆದರೆ ವಾಸುಕಿ ವೈಭವ್ ಕೇಸ್ ಏನೂ ಬೇಡ ಕೇವಲ ಕ್ಷಮೆಯಾಚಿಸಿದೆ ಸಾಕು ಎಂದು ಹೇಳಿದ್ದರಿಂದ ಕಿರಿಕ್ ಮಾಡಿದವರು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
kantara The group quarreled with Vasuki Vaibhav while watching ‘Kantara’.