ಕಾಂತಾರ ಹಿಂದಿ ಮತ್ತು ತೆಲುಗು ಅವತರಣಿಕೆಯ ಟ್ರೈಲರ್ ಬಿಡುಗಡೆ…
ಈ ವರ್ಷ ಕನ್ನಡ ಚಿತ್ರ ರಂಗಕ್ಕೆ ಒಂದು ರೀತಿಯಲ್ಲಿ ಸುವರ್ಣ ಯುಗ , ಕೆಜಿಎಫ್ ಚಿತ್ರದಿಂದ ಶುರುವಾದ ಪ್ಯಾನ್ ಇಂಡಿಯ ಚಿತ್ರಗಳ ಬಿಡುಗಡೆ ಇದೀಗ ಕಾಂತಾರ ವೆರೆಗೂ ಬಂದು ನಿಂತಿದೆ. ಮಧ್ಯದಲ್ಲಿ ಚಾರ್ಲಿ 777 ವಿಕ್ರಾಂತ್ ರೋಣಾ ಚಿತ್ರಗಳು ಉತ್ತಮ ಹೆಸರು ಮತ್ತು ಕಲೆಕ್ಷನ್ ಮಾಡಿವೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಈಗಾಗಲೇ ಈ ವರ್ಷದ ಬ್ಲಾಕ್ ಬ್ಲಾಸ್ಟರ್ ಪಟ್ಟಿ ಸೇರ್ಪಡೆಯಾಗಿದೆ. ತುಳುನಾಡಿನ ಸೊಗಡಿನ ಕಥೆಯನ್ನ ಹೇಳುವಲ್ಲಿ ರಿಷಬ್ ಸಂಪೂರ್ಣವಾಗಿ ಗೆಲುವ ಕಂಡಿದ್ದಾರೆ ಎರಡನೇ ವಾರಕ್ಕೆ ಕಾಲಿಟ್ಟರು ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಕಾಂತಾರ ಚಿತ್ರಕ್ಕೆ ಹೊರ ರಾಜ್ಯ ಮತ್ತು ಭಾಷೆಗಳಿಂದಲೂ ಬೇಡಿಕೆ ಬಂದ ಹಿನ್ನಲೆಯಲ್ಲಿ ಕಾಂತಾರ ಚಿತ್ರವನ್ನ ಹಿಂದಿ ಮತ್ತು ತೆಲುಗು ಬಾಷೆಗೆ ಡಬ್ ಮಾಡಲಾಗಿದೆ. ಇಂದು ಕಾಂತಾರ ಹಿಂದಿ ಮತ್ತು ತೆಲುಗು ಅವತರಣಿಕೆಯ ಟ್ರೈಲರ್ ಗಳನ್ನ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಹೊಂಬಾಳೆ ಫಿಲಂಸ್ ಕನ್ನಡ ಚಿತ್ರಗಳನ್ನ ದೇಶಾದ್ಯಂತ ಪರಿಚಯಿಸುತ್ತಿದೆ.
ಇನ್ನು ಚಿತ್ರದ ಪಾತ್ರ ವರ್ಗದ ಬಗ್ಗೆ ಮಾತನಾಡುವುದಾದರೇ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುದ್ದು, ಅಚ್ಯೂತ್ ಕುಮಾರ್ , ಪ್ರಮೋದ ಶೆಟ್ಟಿ, ಮಾನಸಿ ಸುಧೀರ್ ಸೇರಿದಂತೆ ಹಲವು ಸ್ಥಳಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
kanthara: Kanthara Hindi and Telugu dub trailer release…