ಮುಂಬೈ, ಮೇ 15: ಯೆಸ್ ಬ್ಯಾಂಕ್ ಪ್ರಕರಣದಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿ.ಎಚ್.ಎಫ್.ಎಲ್) ನ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಇಬ್ಬರನ್ನು ಪಿಎಂಎಲ್‌ಎ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಅವರಿಗೆ ಹತ್ತು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳವಾರ, ಬಾಂಬೆ ಹೈಕೋರ್ಟ್ ವಾಧವನ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಏಪ್ರಿಲ್‌ನಲ್ಲಿ ಡಿ.ಎಚ್.ಎಫ್.ಎಲ್ ಪ್ರವರ್ತಕರು ಮತ್ತು ಇತರ ಇಪ್ಪತ್ತೊಂದು ಮಂದಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಖಂಡಾಲಾದಿಂದ ಮಹಾಬಲೇಶ್ವರಕ್ಕೆ ಪ್ರಯಾಣಿಸುತ್ತಿರುವುದು ಕಂಡುಬಂದಿತ್ತು. ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು ಮತ್ತು ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು, ನಂತರ ಏಪ್ರಿಲ್ 26 ರಂದು ಮಹಾಬಲೇಶ್ವರದಿಂದ ಯೆಸ್ ಬ್ಯಾಂಕ್ ಪ್ರಕರಣದಲ್ಲಿ ವಾಧವಾನ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿತ್ತು.
ಕಳೆದ ವಾರ, ಇಡಿ ಯೆಸ್ ಬ್ಯಾಂಕ್ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಯೆಸ್ ಬ್ಯಾಂಕ್ ಸಂಸ್ಥಾಪಕ ಮತ್ತು ಆರೋಪಿ ರಾಣಾ ಕಪೂರ್ ಅವರು ಡಿ.ಎಚ್.ಎಫ್.ಎಲ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅನುಮಾನಾಸ್ಪದ ಸಾಲ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ರಾಣಾ ಕಪೂರ್ ಜತೆಗೆ ಅವರ ಪತ್ನಿ ಬಿಂದು ಕಪೂರ್, ಅವರ ಪುತ್ರಿಯರಾದ ರೋಶ್ನಿ, ರಾಧಾ ಮತ್ತು ರಾಖೀ ಅವರನ್ನೂ ಇಡಿ ಹೆಸರಿಸಿದೆ. ಈ ಪ್ರಕರಣದ ಪ್ರಾಥಮಿಕ ಚಾರ್ಜ್‌ಶೀಟ್ ಇದಾಗಿದ್ದು, ಮುಂದಿನ ತಿಂಗಳುಗಳಲ್ಲಿ ಪೂರಕ ಚಾರ್ಜ್‌ಶೀಟ್ ಸಲ್ಲಿಸಬಹುದು.
ರಾಣಾ ಕಪೂರ್ ಇಡಿಗೆ ನೀಡಿದ ಹೇಳಿಕೆಯಲ್ಲಿ, “2018 ರಲ್ಲಿ ಡಿಎಚ್‌ಎಫ್‌ಎಲ್ 8,000 ರಿಂದ 10,000 ಕೋಟಿ ರೂ. ಮೌಲ್ಯದ ಚಿಲ್ಲರೆ ಹಿರಿಯ ಸಾರ್ವಜನಿಕ ಡಿಬೆಂಚರ್‌ಗಳನ್ನು ನೀಡಿದ್ದು, ಬ್ಯಾಂಕಿನ ಬೋರ್ಡ್ ಕ್ರೆಡಿಟ್ ಕಮಿಟಿಯ ಅನುಮೋದನೆ ಮೇರೆಗೆ ಅದರ ಖರೀದಿಗೆ ಅಂದಾಜು 3,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಡಿಎಚ್‌ಎಫ್‌ಎಲ್ ಸಮೂಹ ಕಂಪನಿಯಾಗಿದ್ದ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಗೆ ಯೆಸ್ ಬ್ಯಾಂಕ್ 1,200 ಕೋಟಿ ರೂ.ಗಳ ಸಾಲವನ್ನು ನೀಡಿದೆ” ಎಂದು ಹೇಳಿದ್ದರು.
ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!
ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...








