Kapil Dev : ಇದೇ ಸಂಜು ಸ್ಯಾಮ್ಸನ್ ಮೈನಸ್ ಪಾಯಿಂಟ್..
ಯುವ ಕ್ರಿಕೆಟರ್ ಸಂಜು ಸ್ಯಾಮ್ಸನ್ ಬಗ್ಗೆ ಟೀಂ ಇಂಡಿಯಾದ ದಿಗ್ಗಜ ಕಪಿಲ್ ದೇವ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ಸಂಜು ಸ್ಯಾಮ್ಸನ್ ಒಂದೆರಡು ಪಂದ್ಯಗಳಲ್ಲಿ ಚೆನ್ನಾಗಿ ಆಡುತ್ತಾರೆ. ಆ ನಂತರ ಅದೇ ಸ್ಥಿರ ಪ್ರದರ್ಶನ ಮುಂದುವರೆಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ಟಿ 20 ವಿಶ್ವಕಪ್ ಅನ್ನು ದೃಷ್ಠಿಯಲ್ಲಿಟ್ಟುಕೊಂಡು ನೋಡೋದಾದ್ರೆ ತಂಡದಲ್ಲಿ ಯುವ ಆಟಗಾರರಿಗೇನು ಕಡಿಮೆ ಇಲ್ಲ.
ಎಲ್ಲ ವಿಭಾಗಗಳಿಗಿಂತ ನಮಗೆ ಸಂಜು ಸ್ಯಾಮ್ಸನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್ ರಂತಹ ನಾಲ್ಕು ಜನ ವಿಕೆಟ್ ಕೀಪರ್ ಗಳಿದ್ದಾರೆ. ಬೇರೆ ಬೇರೆಯಾಗಿ ನೋಡೋದಾದ್ರೆ ಅವರಿಗೆ ಅವರೇ ಸರಿಸಾಟಿಯಾಗಿದ್ದಾರೆ.
ಬ್ಯಾಟಿಂಗ್, ಸ್ಟಂಪಿಂಗ್ ಚೆನ್ನಾಗಿ ಮಾಡುತ್ತಾರೆ. ಈ ಆಟಗಾರರು ತಮ್ಮದೇಯಾದ ದಿನದಲ್ಲಿ ಒಂಟಿ ಕೈಯಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ.
ಆದ್ರೆ ನನ್ನ ದೃಷ್ಠಿಯಲ್ಲಿ ಒಬ್ಬ ವಿಕೆಟ್ ಕೀಪರ್ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಆ ಕ್ರಿಕೆಟ್ ಸಂಜು ಸ್ಯಾಮ್ಸನ್.
ಆತ ಸಮರ್ಥ ಆಟಗಾರ, ಟ್ಯಾಲೆಂಟ್ ಕೂಡ ಇದೆ. ಆದ್ರೆ ಸತತ ಅವಕಾಶಗಳನ್ನು ನೀಡಿದ್ರೆ ಒಂದೆರೆಡು ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಆಡುತ್ತಾರೆ.
ಆ ನಂತರ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಾರೆ. ಇದೇ ಅವರ ದೊಡ್ಡ ಮೈನಸ್ ಪಾಯಿಂಟ್ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಅಂದಹಾಗೆ ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅದ್ಭುತ ಪ್ರದರ್ಶನ ನೀಡಿದೆ.
ಸಂಜು ಸ್ಯಾಮ್ಸನ್ ಕ್ಯಾಪ್ಟನ್ಸಿಯಲ್ಲಿ ರಾಜಸ್ಥಾನ್ ರಾಯಲ್ಸ್ ಲೀಗ್ ಹಂತದಲ್ಲಿ ಒಳ್ಳೆಯ ಪ್ರದರ್ಶನ ನೀಡಿ ಪೈನಲ್ ತಲುಪಿತ್ತು.
ಆದ್ರೆ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಕಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಟಾಪ್ ಸ್ಕೋರರ್ ಆಗಿ ನಿಂತಿದ್ದಾರೆ.
17 ಪಂದ್ಯಗಳಲ್ಲಿ 863 ರನ್ ಗಳನ್ನು ಗಳಿಸಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ. ಬಟ್ಲರ್ ಖಾತೆಯಲ್ಲಿ ನಾಲ್ಕು ಸೆಂಚೂರಿಗಳಿವೆ.
ಇನ್ನು ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸಂಜು ಸ್ಯಾಮ್ಸನ್ 17 ಪಂದ್ಯಗಳನ್ನಾಡಿದ್ದು, 28.63 ಸರಾಸರಿಯಲ್ಲಿ 146.79 ಸ್ಟ್ರೈಕ್ ರೇಟ್ ನಲ್ಲಿ 458 ರನ್ ಗಳಿಸಿದ್ದಾರೆ.
ಅವರ ವೈಯಕ್ತಿಕ ಗರಿಷ್ಟ ಸ್ಕೋರ್ 55 ರನ್ ಆಗಿದ್ದು, 43 ಬೌಂಡರಿ, 26 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಆದ್ರೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನ ಬಿಸಿಸಿಐ ಪರಿಗಣಿಸಿಲ್ಲ.