ಚೀನಾ – ಭಾರತ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ; ’56 ಇಂಚಿನ ಎದೆ ಎಲ್ಲಿ’ ಎಂದ ಕಪಿಲ್ ಸಿಬಲ್
ನವದೆಹಲಿ : ಕಳೆದ ಏಪ್ರಿಲ್ ತಿಂಗಳಿಂದ ಲಡಾಕ್ ನ ಭಾರತ-ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಚೀನಾ ಸೈನಿಕರು ಅಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದಲ್ಲದೆ, ಭಾರತೀಯ ಯೋಧರ ಮೇಲೆ ಕಿರಿಕ್ ಮಾಡುತ್ತಲೇ ಬಂದಿದ್ದರು. ಭಾರತ-ಚೀನಾ ನಡುವೆ ಮಾತುಕತೆಗಳು ನಡೆದಿರುವ ಬೆನ್ನಲ್ಲೇ ಚೀನಾ ಸೈನಿಕರು ಅಟ್ಟಹಾಸ ಮೆರೆದಿದ್ದಾರೆ.
ಸೋಮವಾರ ರಾತ್ರಿ ಚೀನಾ-ಭಾರತ ಸೈನಿಕರ ನಡುವೆ ಕಾಳಗ ನಡೆದಿದ್ದು, ಇದರಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರತಿಕ್ರಿಯೆ ನೀಡಿದ್ದು, ಲಡಾನ್ ನಲ್ಲಿ ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ದ್ವಿಮುಖ ರಾಜಕೀಯ, ಯುಪಿಎ ಸರ್ಕಾರ ಎಲ್‌ಎಸಿಯಲ್ಲಿ ಚೀನಾ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದದ್ದನ್ನು ಮೋದಿ ಜೀ ಟೀಕಿಸುತ್ತಿದ್ದರು. ಈಗ ಅವರೇಕೆ ಕ್ರಮಕ್ಕೆ ಮುಂದಾಗುತ್ತಿಲ್ಲ? ಇತ್ತ ನೇಪಾಳವೂ ಸಹ ಭಾರತದ ವಿರುದ್ಧ ತಿರುಗಿಬಿದ್ದಿದೆ. ಆದರೂ ಮಾತುಕತೆ ಪ್ರಸ್ತಾವನೆ ಏಕೆ ಎಂದಿರುವ ಕಪಿಲ್ ಸಿಬಲ್ 56 ಇಂಚಿನ ಎದೆ ಎಲ್ಲಿ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.








