ಧರ್ಮಯರಾಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಸಿಎಂ
ಬೆಂಗಳೂರು:ಬೆಂಗಳೂರಿನ ತಿಹಾಸಿಕ ಧರ್ಮಯಾರನ ಕರಗ ಮಹೋತ್ಸವ ಅದ್ಧೂರಿಯಾಗಿ ಜರಗುತ್ತಿದ್ದು, ಉತ್ಸವದ ಹಸಿ ಕರಗದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು.
ಕೊರೊನಾ ಕಾರಣದಿಂದ ಕಳೆದ 2 ವರ್ಷದಿಂದ ಸರಳವಾಗಿ ಕರಗ ಉತ್ಸವವನ್ನು ಆಚರಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಸಿ ಕರಗ ಉತ್ಸವದ ಅಂಗವಾಗಿ ಸಿಎಂ ಬೊಮ್ಮಾಯಿಯವರು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಿರ್ವಿಘ್ನವಾಗಿ ಕರಗ ನಡೆಯಲಿ, ನಾಡಿಗೆ ಒಳಿತಾಗಲಿ ಎಂದು ಸಿಎಂ ಪ್ರಾರ್ಥಿಸಿದರು.
ಬಳಿಕ ಕರಗ ಹೊರುತ್ತಿರುವ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದರು. ಜ್ಞಾನೇಂದ್ರ ಅವರು ಕರಗ ಹೊರುತ್ತಿರುವುದು ಇದು 12ನೇ ಬಾರಿ ಎಂಬುದು ವಿಶೇಷ.
ಇಂದು (ಶುಕ್ರವಾರ) ರಾತ್ರಿ 10 ಗಂಟೆಗೆ ರಥೋತ್ಸವ ಮತ್ತು ಬೆಳಗಿನ ಜಾವ 3 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಗುರುವಾರ ಹಸಿ ಕರಗ ಮಹೋತ್ಸವ ನಡೆದಿದ್ದು, ಏ.16ರಂದು ಕರಗ ಶಕ್ತೋತ್ಸವ ಮತ್ತು ಧರ್ಮರಾಯ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ.








