ಆಂಗ್ಲ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟನೆ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರಿ ತಾಲೂಕಿನಲ್ಲಿ ಅಳವಡಿಸಲಾಗಿದ್ದ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದದ್ದಾರೆ.
ನಗರದಲ್ಲಿ ನಾಮಫಲಕಗಳನ್ನು ಆಂಗ್ಲ ಮಾಧ್ಯಮದಲ್ಲಿ ಬರೆಯಿಸಿ ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ. ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡದಲ್ಲಿ ಬರೆಯಿಸಬೇಕು ಎಂದುಕಾರ್ಯಕರ್ತರು ನಾಮಫಲಕಗಳಿಗೆ ಮಸಿ ಬಳೆದರು.
ಅಲ್ಲದೇ ಮುಂದಿನ ದಿಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡರ ಬಣದ ಕಾರ್ಯಕರ್ತರು ಎಚ್ಚರಿಸಿದರು.