ಮಂಡ್ಯ : ಜೆಡಿಎಸ್ (JDS) ಪಕ್ಷವನ್ನು ಅಧಿಕಾರಕ್ಕೆ ತಂದರೆ ವರ್ಷಕ್ಕೆ 5 ಸಿಲಿಂಡರ್ ಕೊಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಮಂಡ್ಯದ (Mandya)ದ ಕೆ.ಆರ್.ಪೇಟೆಯಲ್ಲಿ ನಡೆದ ಪ್ರಚಾರ (Election Campaign)ದಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ನಾನು ಸಿಲಿಂಡರ್ ಘೋಷಣೆ ಮಾಡಿದ್ದೆ. ಆದರೆ, ಅದನ್ನು ಕಾಪಿ ಮಾಡಿ ಬಿಜೆಪಿ 3 ಅಂತ ಹೇಳಿದೆ. ಆದರೆ, ನಾನು 5 ಸಿಲಿಂಡರ್ ಕೊಡುತ್ತೇನೆ. ಅವರಿಗೆ ಬಡ ಜನರ ಬಗ್ಗೆ ಪ್ರೀತಿ ಇದ್ದಿದ್ದರೆ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೇ ಕೊಡುತ್ತಿತ್ತು. ಹೀಗೆ ಬೆಲೆ ಏರಿಕೆ ಮಾಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.
ದೇವೇಗೌಡ ಅವರು ನನ್ನ ಒತ್ತಡ ಕಡಿಮೆ ಮಾಡುವುದಕ್ಕಾಗಿ ಅನಾರೋಗ್ಯದ ಮಧ್ಯೆಯೂ ಓಡಾಡುತ್ತಿದ್ದಾರೆ. ಅವರು ಪ್ರಚಾರಕ್ಕೆ ಬಂದಾಗ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಆದರೆ, ಮೈಸೂರಿಗೆ ಪಂಚ ರತ್ನ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಮೇಲೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಹೇಳಿದ್ದಾರೆ.
ಪಂಚರತ್ನ ಕಾರ್ಯಕ್ರಮವನ್ನು ಜನರು ಒಪ್ಪಿ ಜೆಡಿಎಸ್ ಕೈ ಹಿಡಿಯುತ್ತಾರೆ. ರೈತರು ಕೇಳ್ತಾರೆ ಇನ್ನೊಮ್ಮೆ ನಿನ್ನ ಸಿಎಂ ಮಾಡ್ತೀವಿ ಸಾಲ ಮನ್ನಾ ಮಾಡಿ ಎಂದು ಕೇಳ್ತಾರೆ. ರೈತರು ಸಾಲಗಾರರು ಆಗಬಾರದು ಎಂದು ಮುಂಗಾರಿನ ವೇಳೆ ಎಕರೆಗೆ 10 ಸಾವಿರ ಕೊಡುತ್ತೇನೆ ಎಂದು ಹೇಳಿದ್ದಾರೆ.








