BJP | ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ?
ಬೆಂಗಳೂರು : ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಸೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ಅವರು ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು. ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಸೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ಅವರು ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು. ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ?
70 ಲಕ್ಷದ ಹುಬ್ಲೋಟ್ ಕೈಗಡಿಯಾರವನ್ನು ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಕೈಗೆ ಕಟ್ಟಿಕೊಳ್ಳುವಾಗ ಸಿದ್ದರಾಮಯ್ಯ ಆತ್ಮಸಾಕ್ಷಿ ಎಲ್ಲಿತ್ತು?
ಸಿದ್ದರಾಮಯ್ಯ ಅವರು ತಾನು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡು ವಿದ್ಯಾರ್ಥಿಗಳ ಪ್ರವಾಸ ಯೋಜನೆಯಲ್ಲೂ ಜಾತಿ ಹುಡುಕಿದರು. ಶಾದಿಭಾಗ್ಯ ಯೋಜನೆ ತಂದು ಹೆಣ್ಣು ಮಕ್ಕಳಲ್ಲೂ ಧರ್ಮ ಹುಡುಕಿದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ?
ಬೆಂಗಳೂರು ನಗರದಲ್ಲಿ @siddaramaiah ಅಧಿಕಾರದಲ್ಲಿದ್ದಾಗ ಡ್ರಗ್ಸ್ ಹಾವಳಿ ಮಿತಿ ಮೀರಿತ್ತು.
ಯುವಜನತೆಗೆ ದುಃಸ್ವಪ್ನವಾಗಿದ್ದ ದಂಧೆಯ ನಿಯಂತ್ರಣಕ್ಕೆ ಶ್ರಮಿಸದೇ ಸುಮ್ಮನಿದ್ದಿದ್ದು ಆತ್ಮಸಾಕ್ಷಿಯೇ?#ಸಿದ್ದುಆತ್ಮಸಾಕ್ಷಿ
— BJP Karnataka (@BJP4Karnataka) June 10, 2022
ನಾನು ಪ್ರಾಮಾಣಿಕ, ಪ್ರಾಮಾಣಿಕ ಎಂದು ಸುಳ್ಳು ಹೇಳುತ್ತಲೇ ಅರ್ಕಾವತಿ ರೀಡು ಪ್ರಕರಣದಲ್ಲಿ ಸಾವಿರಾರು ಕೋಟಿ ಕೈ ಬದಲಾಗುವಂತೆ ನೋಡಿಕೊಂಡಿರಿ. ಆಹಾ ಎಂಥಹ ಆತ್ಮಸಾಕ್ಷಿ ನಿಮ್ಮದು ಸಿದ್ದರಾಮಯ್ಯ!!!
ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಡ್ರಗ್ಸ್ ಹಾವಳಿ ಮಿತಿ ಮೀರಿತ್ತು. ಯುವಜನತೆಗೆ ದುಃಸ್ವಪ್ನವಾಗಿದ್ದ ದಂಧೆಯ ನಿಯಂತ್ರಣಕ್ಕೆ ಶ್ರಮಿಸದೇ ಸುಮ್ಮನಿದ್ದಿದ್ದು ಆತ್ಮಸಾಕ್ಷಿಯೇ?
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಎಸ್‌ಡಿಪಿಐ, ಪಿಎಫ್ಐನಂತಹ ಮತಾಂಧ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡರು. ಈಗ ಬಿಜೆಪಿ ಸರ್ಕಾರ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುವಾಗ #ಸಿದ್ದುಆತ್ಮಸಾಕ್ಷಿ ಎಲ್ಲಿತ್ತು?
ಸಿದ್ದರಾಮಯ್ಯ ಅವರು ತಾನು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡು ವಿದ್ಯಾರ್ಥಿಗಳ ಪ್ರವಾಸ ಯೋಜನೆಯಲ್ಲೂ ಜಾತಿ ಹುಡುಕಿದರು.
ಶಾದಿಭಾಗ್ಯ ಯೋಜನೆ ತಂದು ಹೆಣ್ಣು ಮಕ್ಕಳಲ್ಲೂ ಧರ್ಮ ಹುಡುಕಿದರು.
ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ?#ಸಿದ್ದುಆತ್ಮಸಾಕ್ಷಿ
— BJP Karnataka (@BJP4Karnataka) June 10, 2022
ಕಾಂಗ್ರೆಸ್ ನಡಿಗೆ-ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದವರು ಅಧಿಕಾರಕ್ಕೆ ಬಂದಾಗ ನೀಡಿದ್ದೆಷ್ಟು ಎಂದು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲು ಸಿದ್ಧರಿರುವರೇ ಎಂದು ಪ್ರಶ್ನಿಸಿದೆ.







