BJP | ಇವರು ಯೋಧರಾಗುವವರಲ್ಲ, ಕಾಂಗ್ರೆಸ್ ಚೇಲಾಗಳು
ಬೆಂಗಳೂರು : “ಪ್ರತಿಭಟನೆಗೆ ಬರುವಾಗ ಪೆಟ್ರೋಲ್ ಬಾಂಬ್, ಸೀಮೆ ಎಣ್ಣೆ, ಹಳೆ ಬಟ್ಟೆಗಳನ್ನು ತೆಗೆದುಕೊಂಡು ಬನ್ನಿ, ರೈಲು, ಬಸ್ಸುಗಳಿಗೆ ಬೆಂಕಿ ಹಚ್ಚಲು ಅನುಕೂಲವಾಗುತ್ತದೆ” ಎಂಬ ಸಂದೇಶ ಪ್ರತಿಭಟನಾಕಾರರ ನಡುವೆ ವಿನಿಮಯವಾಗಿದೆ.
ಸೇನೆ ಸೇರ ಬಯಸುವವರು ಹೀಗೆ ಯೋಚಿಸಲು ಹೇಗೆ ಸಾಧ್ಯ? ಇವರು ಯೋಧರಾಗುವವರಲ್ಲ, ಕಾಂಗ್ರೆಸ್ ಚೇಲಾಗಳು ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶದಲ್ಲಿ ಪ್ರತಿಭಟನೆಗಳು ಜೋರಾಗುತ್ತಿವೆ. ಈ ನಡುವೆ ಇದು ಕಾಂಗ್ರೆಸ್ ಪ್ರಯೋಚಿತ ಎಂದು ಬಿಜೆಪಿ ಆರೋಪಿಸಿದೆ.
ಅಲ್ಲದೆ ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ದೇಶವೇ ಹೊತ್ತಿ ಉರಿಯುವಂತ ಪರಿಸ್ಥಿತಿ ನಿರ್ಮಾಣ ಮಾಡಿದ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ನೀಡಿರುವ ಹೇಳಿಕೆ ಏನನ್ನು ಸೂಚಿಸುತ್ತದೆ?
"ಪ್ರತಿಭಟನೆಗೆ ಬರುವಾಗ ಪೆಟ್ರೋಲ್ ಬಾಂಬ್, ಸೀಮೆ ಎಣ್ಣೆ, ಹಳೆ ಬಟ್ಟೆಗಳನ್ನು ತೆಗೆದುಕೊಂಡು ಬನ್ನಿ, ರೈಲು, ಬಸ್ಸುಗಳಿಗೆ ಬೆಂಕಿ ಹಚ್ಚಲು ಅನುಕೂಲವಾಗುತ್ತದೆ" ಎಂಬ ಸಂದೇಶ ಪ್ರತಿಭಟನಾಕಾರರ ನಡುವೆ ವಿನಿಮಯವಾಗಿದೆ.
ಸೇನೆ ಸೇರ ಬಯಸುವವರು ಹೀಗೆ ಯೋಚಿಸಲು ಹೇಗೆ ಸಾಧ್ಯ?
ಇವರು ಯೋಧರಾಗುವವರಲ್ಲ, ಕಾಂಗ್ರೆಸ್ ಚೇಲಾಗಳು!#IndiaWithAgniveer— BJP Karnataka (@BJP4Karnataka) June 20, 2022
ಶಾಂತಿಯುತ ಪ್ರತಿಭಟನೆ ಮಾಡಿ, ಆದರೆ ಹೋರಾಟ ನಿಲ್ಲಿಸಬೇಡಿ ಎಂದು ಹೇಳುವುದು ಉದ್ರಿಕ್ತರನ್ನು ಇನ್ನಷ್ಟು ಪ್ರಚೋದಿಸಿದಂತಲ್ಲವೇ?
ತೆಲಂಗಾಣ, ಸಿಕಂದರಾಬಾದ್, ಬಿಹಾರದಲ್ಲಿ ತನಿಖೆ ಸಂದರ್ಭದಲ್ಲಿ ಲಭಿಸಿದ ಮಾಹಿತಿಗಳಿಂದ ಇದು #CongressToolKit ಎಂಬುದು ಸ್ಪಷ್ಟವಾಗುತ್ತಿದೆ.ಬಂಧಿತರಾದವರ ಮೊಬೈಲ್ಗೆ ಹಿಂಸಾಚಾರವನ್ನು ಎಲ್ಲಿ, ಹೇಗೆ ನಡೆಸಬೇಕೆಂಬ ಬಗ್ಗೆ ಪೂರ್ವ ನಿರ್ದೇಶಿತ ಮಾಹಿತಿ ರವಾನೆಯಾಗಿದೆ. ಇದು ಪ್ರತಿಪಕ್ಷಗಳ ಹೋರಾಟದ ನೀತಿಯೇ ಎಂದು ಪ್ರಶ್ನಿಸಿದೆ.
ತೆಲಂಗಾಣ, ಸಿಕಂದರಾಬಾದ್, ಬಿಹಾರದಲ್ಲಿ ತನಿಖೆ ಸಂದರ್ಭದಲ್ಲಿ ಲಭಿಸಿದ ಮಾಹಿತಿಗಳಿಂದ ಇದು #CongressToolKit ಎಂಬುದು ಸ್ಪಷ್ಟವಾಗುತ್ತಿದೆ.
ಬಂಧಿತರಾದವರ ಮೊಬೈಲ್ಗೆ ಹಿಂಸಾಚಾರವನ್ನು ಎಲ್ಲಿ, ಹೇಗೆ ನಡೆಸಬೇಕೆಂಬ ಬಗ್ಗೆ ಪೂರ್ವ ನಿರ್ದೇಶಿತ ಮಾಹಿತಿ ರವಾನೆಯಾಗಿದೆ.
ಇದು ಪ್ರತಿಪಕ್ಷಗಳ ಹೋರಾಟದ ನೀತಿಯೇ?#IndiaWithAgniveer
— BJP Karnataka (@BJP4Karnataka) June 20, 2022
ವಿಶ್ವದ ಅಗ್ರಮಾನ್ಯ ಸೇನೆಯ ಯೋಧರು ಹಾಗೂ ಭಾರತೀಯ ಯೋಧರ ನಡುವೆ ಸರಾಸರಿ ವಯೋಮಾನದ ವಿಚಾರದಲ್ಲಿ ಏರುಪೇರು ಇದೆ.ಅಮೆರಿಕಾದ ಯೋಧರ ಸರಾಸರಿ ವಯಸ್ಸು 28, ಇಂಗ್ಲೆಂಡ್ 26, ಆದರೆ ಭಾರತದ ಯೋಧರ ಸರಾಸರಿ ವಯಸ್ಸು 32 ವರ್ಷ.
ಆದರೆ ಅಗ್ನಿಪಥ್ ಯೋಜನೆಯಿಂದ ಈ ಅಂತರ ಕಡಿಮೆಯಾಗಲಿದೆ. ವಿಶ್ವದ ಅತ್ಯಂತ ಯುವ ಸೇನೆ ಭಾರತದ್ದಾಗಲಿದೆ ಎಂದು ಬಿಜೆಪಿ ತಿಳಿಸಿದೆ.