BJP | ದಲಿತ ನಾಯಕರನ್ನು ಮುಗಿಸಿದ ಸಿದ್ದರಾಮಯ್ಯಗೆ ಈಗ ಇದೆಂತ ದಲಿತ ಪ್ರೀತಿ!?
ಬೆಂಗಳೂರು : ನಾನು ಮತ್ತೆ ಮುಖ್ಯಮಂತ್ರಿಯಾದರೇ ದಲಿತ ಸಾಲ ಮನ್ನಾ ಮಾಡುವೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಆದರೆ, ಹೋದರೆ, ಅರೆರೆ..! ಅಧಿಕಾರದಲ್ಲಿದ್ದಾಗ ದಲಿತ ನಾಯಕರನ್ನು ಮುಗಿಸಿದ ಸಿದ್ದರಾಮಯ್ಯ ಅವರಿಗೆ ಈಗ ಇದೆಂತ ದಲಿತ ಪ್ರೀತಿ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ಕುಟುಕಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ…
ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ನಾಯಕ ಇನ್ನೊಬ್ಬರಿಲ್ಲ. ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸ್ಥಾನಕ್ಕಾಗಿ ಡಾ.ಜಿ. ಪರಮೇಶ್ವರ್ ಅವರ ನಾಯಕತ್ವವನ್ನೇ ಮುಗಿಸಿದ ಸಿದ್ದರಾಮಯ್ಯ ಅವರು ದಲಿತರ ಸಾಲ ಮನ್ನಾದ ಬಗ್ಗೆ ಮಾತನಾಡುವುದು ಬೂಟಾಟಿಕೆಯಲ್ಲವೇ?
ಸಿದ್ದರಾಮಯ್ಯನವರೇ, ನೀವು ಯಾರ ಹೆಗಲ ಮೇಲೆ ಬಂದೂಕಿಟ್ಟು, ಯಾರತ್ತ ಗುಂಡು ಹಾರಿಸುತ್ತಿದ್ದೀರಿ?
ದಲಿತರ ಸಾಲಮನ್ನಾ ನೆವದಲ್ಲಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದೀರಿ.
ಇದರರ್ಥ @DKShivakumar ಅವರನ್ನು ಕಪಾಲಿ ಬೆಟ್ಟಕ್ಕೆ ಪ್ರಾರ್ಥನೆಗೆ ಕಳುಹಿಸುವುದೇ?#SiddaramaiahAgainstDalits
— BJP Karnataka (@BJP4Karnataka) May 19, 2022
ಸಿದ್ದರಾಮಯ್ಯನವರೇ, ನೀವು ಯಾರ ಹೆಗಲ ಮೇಲೆ ಬಂದೂಕಿಟ್ಟು, ಯಾರತ್ತ ಗುಂಡು ಹಾರಿಸುತ್ತಿದ್ದೀರಿ? ದಲಿತರ ಸಾಲಮನ್ನಾ ನೆವದಲ್ಲಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದೀರಿ.ಇದರರ್ಥ ಡಿ.ಕೆ.ಶಿವಕುಮಾರ್ ಅವರನ್ನು ಕಪಾಲಿ ಬೆಟ್ಟಕ್ಕೆ ಪ್ರಾರ್ಥನೆಗೆ ಕಳುಹಿಸುವುದೇ?
ಸಿದ್ದರಾಮಯ್ಯ ಅವರಂತಹ ದಲಿತ ವಿರೋಧಿ ನಾಯಕ ಇನ್ನೊಬ್ಬರಿಲ್ಲ.
ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸ್ಥಾನಕ್ಕಾಗಿ ಡಾ.ಜಿ. ಪರಮೇಶ್ವರ್ ಅವರ ನಾಯಕತ್ವವನ್ನೇ ಮುಗಿಸಿದ @siddaramaiah ಅವರು ದಲಿತರ ಸಾಲ ಮನ್ನಾದ ಬಗ್ಗೆ ಮಾತನಾಡುವುದು ಬೂಟಾಟಿಕೆಯಲ್ಲವೇ?#SiddaramaiahAgainstDalits
— BJP Karnataka (@BJP4Karnataka) May 19, 2022
ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಾಗಲೆಲ್ಲ ಅದನ್ನು ಸಿದ್ದರಾಮಯ್ಯ ಅವರು #ಮೀರ್‌ಸಾದಿಕ್ ತನದಿಂದ ಸದ್ದಡಗಿಸುತ್ತಿದ್ದರು. ನನಗಿಂತರ ದೊಡ್ಡ ದಲಿತ ಯಾರಿದ್ದಾರೆ ಎಂಬ ಹೇಳಿಕೆಯ ಮೂಲಕ “ದಲಿತರನ್ನೆಂದಿಗೂ ಮುಖ್ಯಮಂತ್ರಿಯಾಗಲು ಬಿಡಲಾರೆ” ಎಂಬ ಸಂದೇಶ ರವಾನಿಸಿದ್ದು ಸುಳ್ಳೇ ಎಂದು ಬಿಜೆಪಿ ಪ್ರಶ್ನೆಗಳ ಸುರಿಮಳೆಗೈದಿದೆ. karnataka bjp reaction on siddaramaiah statement