ಸಿದ್ದರಾಮಯ್ಯ ಅವರ “ಅಹಿಂದ” ಹೋರಾಟ ಅಕ್ಷರಶಃ ಬೆತ್ತಲಾಗಿದೆ
ಬೆಂಗಳೂರು : ಸಿದ್ದರಾಮಯ್ಯ ಅವರ “ಅಹಿಂದ” ಹೋರಾಟ ಈಗ ಅಕ್ಷರಶಃ ಬೆತ್ತಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ.
ಮಾಜಿ ಸಚಿವೆ ಮೊಟಮ್ಮ ಅವರ ಹೇಳಿಕೆಯನ್ನು ಉಲ್ಲೇಖಿಸಿ, ವಿಪಕ್ಷ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ..
ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಕಟ್ಟಾಳುವಾಗಿದ್ದ ಮೋಟಮ್ಮ ಅವರನ್ನು ಸಿದ್ದರಾಮಯ್ಯ ರಾಜಕೀಯವಾಗಿ ಮೂಲೆಗುಂಪು ಮಾಡಿದರು. ಮೋಟಮ್ಮ ಅವರನ್ನು ಸಚಿವರನ್ನಾಗಿ ಮಾಡುವ ಸಂದರ್ಭ ಬಂದಾಗ ವಿಧಾನಪರಿಷತ್ ಸದಸ್ಯರು ಎಂದು ಕಡೆಗಣಿಸಲಾಗಿತ್ತು. ಸಿದ್ದರಾಮಯ್ಯ ಈಗ #ದಲಿತವಿರೋಧಿಸಿದ್ದರಾಮಯ್ಯ ಆಗಿ ಬದಲಾಗಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಮೋಟಮ್ಮ ಅವರು ಸಚಿವೆಯಾಗುವುದಕ್ಕೆ ಎಲ್ಲ ಅರ್ಹತೆ ಹೊಂದಿದ್ದರು. ಆದರೆ ಮೈಸೂರು “ಜಲದರ್ಶಿನಿ” ಬಳಗಕ್ಕೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಅರ್ಹ ಮೋಟಮ್ಮ ಅವರನ್ನು ಮೂಲೆಗುಂಪು ಮಾಡಿದರು.
https://twitter.com/BJP4Karnataka/status/1535900647484030976?s=20&t=fIvh0GDY3cQz39IR7l-uTw
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಸಿದ್ದರಾಮಯ್ಯ ಅವರ ಬಗ್ಗೆ ಮಾಡಿದ ವ್ಯಾಖ್ಯಾನಕ್ಕೆ ಮೋಟಮ್ಮ ಆತ್ಮಕಥನ ಇನ್ನಷ್ಟು ಪುಷ್ಠಿ ಒದಗಿಸಿದೆ. ಅಧಿಕಾರಕ್ಕಾಗಿ ನಾನೇ ದಲಿತ ಎಂದವರು, ರಾಜಕೀಯದುದ್ದಕ್ಕೂ ಮಾಡಿದ್ದು ದಲಿತ ದ್ರೋಹ.
ಸಿದ್ದರಾಮಯ್ಯ ಅವರ “ಅಹಿಂದ” ಹೋರಾಟ ಈಗ ಅಕ್ಷರಶಃ ಬೆತ್ತಲಾಗಿದೆ. ಅಹಿಂದದಲ್ಲಿ ಈಗ ದಲಿತರು ಇಲ್ಲ, ಹಿಂದುಳಿದವರೂ ಇಲ್ಲ. ಅವರ ವಕಾಲತ್ತೇನಿದ್ದರೂ ಒಂದು ಸಮುದಾಯದ ಪರ ಮಾತ್ರ. ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅವರಿಂದ ಒಳ ಏಟು ಮಾತ್ರ.
https://twitter.com/BJP4Karnataka/status/1535900288229310464?s=20&t=fIvh0GDY3cQz39IR7l-uTw
ಸಿದ್ದರಾಮಯ್ಯ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಕೊನೆಮೊದಲಿಲ್ಲದ ಪಟ್ಟಿಯಿದೆ. √ ಮಲ್ಲಿಕಾರ್ಜುನ ಖರ್ಗೆ √ ಡಾ.ಜಿ.ಪರಮೇಶ್ವರ್ √ ಮೋಟಮ್ಮ √ ಶ್ರೀನಿವಾಸ್ ಪ್ರಸಾದ್. ಇನ್ನೆಷ್ಟು ದಲಿತರ ಬಲಿ ಪಡೆಯುತ್ತೀರಿ ಎಂದು ಬಿಜೆಪಿ ಪ್ರಶ್ನಿಸಿದೆ.