BJP | ಭ್ರಷ್ಟಾಚಾರದಿಂದ ರಕ್ಷಿಸಬೇಕಿದೆ.. ಡಿಕೆಶಿ ಹೇಳಿಕೆ ಹಾಸ್ಯಾಸ್ಪದ
ಬೆಂಗಳೂರು : ರಾಜ್ಯವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕಿದೆ ಎಂದು ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ ರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಉ ಬಿಜೆಪಿ ಘಟಕ ಆರೋಪಿಸಿದೆ.
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿ, ಕಿಂಗ್ ಪಿನ್ ಗಳನ್ನು ಬಂಧಿಸಿ ವಿಚಾರಣೆ ನಡೆಸದ ಸರ್ಕಾರ, ಪ್ರಕರಣವನ್ನು ಬಯಲೆಗೆಳೆದ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ಜಾರಿ ಮಾಡಿರುವುದು ಖಂಡನೀಯ. ಇದು ರಾಜ್ಯ ಗೃಹ ಇಲಾಖೆಯ ದೌರ್ಬಲ್ಯಕ್ಕೆ ಸಾಕ್ಷಿ. ಇದು ಭ್ರಷ್ಟ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಪರಮಾವಧಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದರು.
ಮಾನ್ಯ @DKShivakumar ಅವರೇ,
ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳು ನೀಡುವ ನೋಟಿಸ್‌ಗೆ ಹಲವು ಆಯಾಮಗಳಿರುತ್ತವೆ.
ಎಲ್ಲವನ್ನೂ ನಿಮ್ಮ ನೆಲೆಯಲ್ಲಿ ಸ್ವೀಕರಿಸಿ ಭೀತಿಗೆ ಒಳಗಾಗಬೇಡಿ.
ಹಗರಣಕ್ಕೆ ಸಂಬಂಧಪಟ್ಟಂತೆ ಇರುವ ಮಾಹಿತಿ ನೀಡಿ ಎಂದು ನೋಟಿಸ್ ನೀಡುವುದು ದಂಡಪ್ರಕ್ರಿಯಾ ಸಂಹಿತೆಯ ಭಾಗ ಅಷ್ಟೇ.#CONgressPSIToolkit pic.twitter.com/F4secOLmkc
— BJP Karnataka (@BJP4Karnataka) April 25, 2022
ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳು ನೀಡುವ ನೋಟಿಸ್‌ಗೆ ಹಲವು ಆಯಾಮಗಳಿರುತ್ತವೆ. ಎಲ್ಲವನ್ನೂ ನಿಮ್ಮ ನೆಲೆಯಲ್ಲಿ ಸ್ವೀಕರಿಸಿ ಭೀತಿಗೆ ಒಳಗಾಗಬೇಡಿ. ಹಗರಣಕ್ಕೆ ಸಂಬಂಧಪಟ್ಟಂತೆ ಇರುವ ಮಾಹಿತಿ ನೀಡಿ ಎಂದು ನೋಟಿಸ್ ನೀಡುವುದು ದಂಡಪ್ರಕ್ರಿಯಾ ಸಂಹಿತೆಯ ಭಾಗ ಅಷ್ಟೇ.
ರಾಜ್ಯವನ್ನು ಭ್ರಷ್ಟಾಚಾರದಿಂದ ರಕ್ಷಿಸಬೇಕಿದೆ ಎಂದು ಕೆಪಿಸಿಸಿಯ #ಭ್ರಷ್ಟಾಧ್ಯಕ್ಷ ರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ.ಇದಕ್ಕಾಗಿಯೇ ಕಾಂಗ್ರೆಸ್ಸಿಗರನ್ನು ತಾನು ಕಳ್ಳ ಪರರ ನಂಬ ಶ್ರೇಣಿಗೆ ಸೇರಿಸಿರುವುದು.ಪರಮ ಭ್ರಷ್ಟಾಚಾರಿಯೊಬ್ಬ ಶುದ್ಧಾಚಾರದ ಮಾತಾಡುವುದು ಚೋದ್ಯವಲ್ಲದೆ ಮತ್ತೇನು?
ಪಿಎಸ್‌ಐ ನೇಮಕ ಹಗರಣದ ಶಂಕಿತರ ಜೊತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಭ್ರಷ್ಟಾಧ್ಯಕ್ಷ @DKShivakumar ಅವರೇ ಈ ಹಗರಣದ ಆರೋಪಿ, ಶಂಕಿತರು ಹಾಗೂ ಫಲಾನುಭವಿಗಳೆಲ್ಲರೂ ಕಾಂಗ್ರೆಸಿಗರು. ಹೀಗಾಗಿ ಕಾಂಗ್ರೆಸ್ ಸಾಥ್ ನೀಡಲೇಬೇಕಲ್ಲವೇ?#CONgressPSIToolkit
— BJP Karnataka (@BJP4Karnataka) April 25, 2022
ಪಿಎಸ್‌ಐ ನೇಮಕ ಹಗರಣದ ಶಂಕಿತರ ಜೊತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಈ ಹಗರಣದ ಆರೋಪಿ, ಶಂಕಿತರು ಹಾಗೂ ಫಲಾನುಭವಿಗಳೆಲ್ಲರೂ ಕಾಂಗ್ರೆಸಿಗರು. ಹೀಗಾಗಿ ಕಾಂಗ್ರೆಸ್ ಸಾಥ್ ನೀಡಲೇಬೇಕಲ್ಲವೇ ಎಂದು ಕುಟುಕಿದೆ.
Karnataka bjp slams kpcc d k shivakumar
.