Karnataka BJP | ಸಿದ್ದು ನಿಮಗೆ ಸಾಟಿ ಇಲ್ಲ, ನಿಮ್ಮ ನೆಮ್ಮದಿಗೆ ಭಂಗವಿಲ್ಲ
ಬೆಂಗಳೂರು : ಚುನಾವಣೆ ಮುಗಿಯುವವರೆಗೆ ಯಾರೂ ಮಲಗಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಬಿಜೆಪಿ ಟ್ವೀಟ್ ನಲ್ಲಿ…
ಚುನಾವಣೆ ಮುಗಿಯುವವರೆಗೆ ಯಾರೂ ಮಲಗಬಾರದು ಎಂದು ಹೇಳಿರುವ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೇ ಮಲಗಿಸುವ ತಂತ್ರ ಹೆಣೆಯುತ್ತಿದ್ದಾರೆ.

ಮುಂದಿನ ಸಿಎಂ ಕೂಗಿನ ಮೂಲಕ ಡಿಕೆಶಿ ನಿದ್ದೆಯನ್ನು ಸಿದ್ದರಾಮಯ್ಯ ಕಸಿಯುತ್ತಿದ್ದಾರೆಯೇ?
ವೇದಿಕೆ ಯಾವುದೇ ಇರಲಿ, ಪಕ್ಷ ಯಾವುದೇ ಇರಲಿ ಸಿದ್ದು ನಿಮಗೆ ಸಾಟಿ ಇಲ್ಲ, ನಿಮ್ಮ ನೆಮ್ಮದಿಗೆ ಭಂಗವಿಲ್ಲ.
ಬಿಸಿಲು, ಮಳೆ, ಬಿರುಗಾಳಿ ಚಳಿಗೆ ಅಳುಕದೇ ನಿದ್ದೆ ಮಾಡುವೆ.
ಕೈ ಕಾರ್ಯಕರ್ತರು ಮಾತ್ರ ಲಬೋ, ಲಬೋ ಎಂದು ಬಿಜೆಪಿ ವ್ಯಂಗ್ಯವಾಡಿದೆ.